ಟಿಪ್ಪರ್‌ನಿಂದ ತಂತಿಗೆ ಹಾನಿ: ಮೆಸ್ಕಾಂಗೆ 3 ಲಕ್ಷ ರೂ. ನಷ್ಟ
ಕುಂದಾಪುರ, ಡಿ.1: ಟಿಪ್ಪರ್ ಲಾರಿಯೊಂದು ವಿದ್ಯುತ್ ತಂತಿ ಎಳೆದು ಕೊಂಡು ಹೋದ ಪರಿಣಾಮ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗಿ ರುವ ಘಟನೆ ನ.27ರಂದು ಸಂಜೆ ವಡೇರಹೋಬಳಿ ಗ್ರಾಮದ ಕೆಪಿಟಿಸಿಎಲ್ ವಿದ್ಯುತ್ ಉಪ ಕೇಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೇಲಕ್ಕೆ ಎತ್ತಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿಯ ಕಂಟೈನರ್ ಮೆಸ್ಕಾಂ ಕಂಪೆನಿಗೆ ಸೇರಿದ 11,000 ವೊಲ್ಟ್ ಪ್ರವಹಿಸುವ ವಿದ್ಯುತ್ ವಾಹಕಗಳನ್ನು ಎಳೆದುಕೊಂಡು ಹೋಗಿದ್ದು, ಇದರ ಪರಿಣಾಮ ಆಧಾರ ಕಂಬಗಳು, ಸಂಪರ್ಕಿತ ಇತರೆ ಸಾಮಗ್ರಿಗಳಿಗೆ ಹಾನಿ ಉಂಟಾಗಿವೆ. ಇದರಿಂದ ಮೆಸ್ಕಾಂಗೆ ಮೂರು ಲಕ್ಷ ರೂ. ನಷ್ಟ ಸಂಭವಿಸಿದೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story