ಫರಂಗಿಪೇಟೆ: ಮನೆಮನೆಗೆ ಬಂದು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ ಚಾಲನೆ

ಫರಂಗಿಪೇಟೆ, ಡಿ. 1: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆ ತ್ಯಾಜ್ಯ ರಾಶಿ ಬಿದ್ದು ನಾರುತ್ತಿದ್ದು ಇದೀಗ ಗ್ರಾಮ ಪಂಚಾಯತ್ ವತಿಯಿಂದ ಮನೆ, ಅಂಗಡಿ, ಹೋಟೆಲ್ ಗಳು ತಿಂಗಳಿಗೆ ನಿಗದಿತ ದರ ಪಾವತಿಗೊಳಿಸಿ ದಿನಂಪ್ರತಿ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ ಶನಿವಾರ ಪುದು ಗ್ರಾಮ ಪಂ. ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಚಾಲನೆ ನೀಡಿದರು.
ಮನೆ 50 ರೂ, ಅಂಗಡಿ 100, ತರಕಾರಿ ಅಂಗಡಿ 200, ಕಬ್ಬು ಜ್ಯೂಸ್ ಅಂಗಡಿ 200, ಹೋಟೆಲ್ 250, ಗ್ಯರೇಜ್ 200, ವೈನ್ ಅಂಗಡಿ 300, ಬಾರ್ 500 ರೂಪಾಯಿಯಂತೆ ನಿಗದಿಪಡಿಸಲಾಗಿದೆ.
ಪಂಚಾಯಕ್ ಅಭಿವೃದ್ಧಿ ಅಧಿಕಾರಿ ಪ್ರೇಮಲತಾ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ, ಮುಸ್ತಫ, ನಝೀರ್, ರಿಯಾಝ್ ಅಮೆಮಾರ್, ಹಾಶಿರ್, ರಿಯಾಝ್ ಕುಂಪನಮಜಲ್, ಅಬ್ದುಲ್ ರಝಾಕ್, ಹುಸೈನ್, ಮನೋಜ್, ರೆಹನಾ, ರಶೀದಾ, ಸುಜಾತ, ಲವೀಣ, ಹೇಮಲತಾ, ಆಶಾ ನಯನ, ಜಯಂತಿ, ಸರೋಜಿನಿ, ನಾಗವೇಣಿ, ಬಾಸ್ಕರ್, ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಫರಂಗಿಪೇಟೆ ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ರಾಜನ್ನ, ಮಾಜಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಎಫ್.ಎಮ್ ಬಶೀರ್, ಮಾಜಿ ಉಪಾಧ್ಯಕ್ಷ ಬಾವ, ಮಜೀದ್ ಫರಂಗಿಪೇಟೆ, ಅಬ್ದುಲ್ ಸಲಾಮ್, ವಿನಯ, ಯೆಶೋಧ, ಸುರೇಖಾ, ಕೈಸ್ ಮತ್ತಿತರರು ಈ ಸಂದರ್ಭ ಉಪಸ್ಥತರಿದ್ದರು.
ನಮ್ಮ ಗ್ರಾಮದ ಸ್ವಚ್ಚತೆಗಾಗಿ ಹೆಚ್ಚಿನ ಆದ್ಯತೆ ನೀಡಿದ್ದು, ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ದಿನಂಪ್ರತಿ ತ್ಯಾಜ್ಯ ವಿಲೇವಾರಿ ನಡೆಸಲು ಟೆಂಡರ್ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ತಿಂಗಳಿಗೆ ನಿಗದಿತ ಹಣವನ್ನು ಕೊಟ್ಟು ಸಹಕರಿಸಿ ನಮ್ಮ ಗ್ರಾಮವನ್ನು ಸ್ವಚ್ಚವಾಗಿಡಬೇಕಾಗಿದೆ. ಮಾತ್ರವಲ್ಲದೇ ಇತರ ಗ್ರಾಮದವರು ಮತ್ತು ನಮ್ಮ ಗ್ರಾಮದವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಕಂಡರೆ ಕ್ರಮ ಕೈಗೊಳ್ಳಲಾಗುವೂದು
- ರಮ್ಲಾನ್ ಮಾರಿಪ್ಪಳ್ಳ,
ಅಧ್ಯಕ್ಷರು ಪುದು ಗ್ರಾಮ ಪಂಚಾಯತ್