ಕರ್ನಾಟಕಕ್ಕೆ ಭರ್ಜರಿ ಜಯ
ರಣಜಿ ಟ್ರೋಫಿ

ಮೈಸೂರು, ಡಿ.1:ರಣಜಿ ಟ್ರೋಫಿ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಶ್ರೀಕಂಠ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 184 ರನ್‌ಗಳ ಸವಾಲು ಪಡೆದಿದಿದ್ದ ಕರ್ನಾಟಕ ಅಂತಿಮ ದಿನವಾಗಿರುವ ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ 70.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವಿನ ನಗೆ ಬೀರಿದೆ. ಆಲ್‌ರೌಂಡರ್ ಶ್ರೇಯಸ್ ಗೋಪಾಲ್(4-64), ನಾಯಕ ವಿನಯ್‌ಕುಮಾರ್(3-41) ಹಾಗೂ ಪವನ್ ದೇಶಪಾಂಡೆ(2-23)ಸಂಘಟಿತ ದಾಳಿಯ ನೆರವಿನಿಂದ ರಣಜಿ ಟ್ರೋಫಿ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಎರಡನೇ ಇನಿಂಗ್ಸ್‌ನಲ್ಲಿ 256 ರನ್‌ಗೆ ನಿಯಂತ್ರಿಸಿದ ಕರ್ನಾಟಕ ಗೆಲ್ಲಲು 184 ರನ್ ಗುರಿ ಪಡೆದಿತ್ತು.
ಮೂರನೇ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿತ್ತು. ಕೊನೆಯ ದಿನವಾದ ಶನಿವಾರ ಗೆಲ್ಲಲು 130 ರನ್ ಗಳಿಸಬೇಕಾಗಿತ್ತು. ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್ ಔಟಾಗದೆ 33 ರನ್(58 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ನಿಶ್ಚಲ್ 21 ರನ್(62 ಎಸೆತ, 2 ಬೌಂಡರಿ) ಕ್ರೀಸ್ ಕಾಯ್ದುಕೊಂಡಿದ್ದರು.
ಅಂತಿಮ ದಿನ ಆಟ ಮುಂದುವರಿಸಿದ ಪಡಿಕ್ಕಲ್ ಮತ್ತು ನಿಶ್ಚಲ್ ಮೊದಲ ವಿಕೆಟ್‌ಗೆ 121 ರನ್ ಗಳಿಸಿದರು. 43.3ನೇ ಓವರ್‌ನಲ್ಲಿ ಪಡಿಕ್ಕಲ್ ಅವರು ಸತ್ಯಜೀತ್ ಬಚಾವ್ ಎಸೆತದಲ್ಲಿ ಪಡಿಕ್ಕಲ್ ಖುರಾನಗೆ ಕ್ಯಾಚ್ ನೀಡಿದರು. ಇದರೊಂದಿಗೆ ಕರ್ನಾಟಕದ ಮೊದಲ ವಿಕೆಟ್ ಪತನಗೊಂಡಿತು. ಪಡಿಕ್ಕಲ್ 77 ರನ್(128ಎ, 11ಬೌ,1ಸಿ) ಗಳಿಸಿದರು. ತಂಡದ ಸ್ಕೋರ್ 131ತಲುಪುವಾಗ ಕೃಷ್ಣಮೂರ್ತಿ ಸಿದ್ಧಾರ್ಥ್ 4 ರನ್ ಗಳಿಸಿ ಸತ್ಯಜೀತ್‌ಗೆ ವಿಕೆಟ್ ಒಪ್ಪಿಸಿದರು. 66.2ನೇ ಓವರ್‌ನಲ್ಲಿ ದೇಗಾ ನಿಶ್ಚಲ್ ಅವರು ಖುರಾನ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಔಟಾಗುವ ಮೊದಲು ಅವರು 61 ರನ್(212ಎ, 4ಬೌ) ಗಳಿಸಿದರು. ಎಂ.ಕೆ. ಅಬ್ಬಾಸ್ ಔಟಾಗದೆ 34 ರನ್ ಮತ್ತು ಪವನ್ ದೇಶಪಾಂಡೆ ಔಟಾಗದೆ 6 ರನ್ ಗಳಿಸಿ ತಂಡವನ್ನು ಪೆವಿಲಿಯನ್ ದಡ ಸೇರಿಸಿದರು. ಮಹಾರಾಷ್ಟ್ರದ ಸತ್ಯಜೀತ್ 56ಕ್ಕೆ 2 ವಿಕೆಟ್ ಮತ್ತು ಚಿರಾಗ್ ಖುರಾನ 53ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
►ಮಹಾರಾಷ್ಟ್ರ ಮೊದಲ ಇನಿಂಗ್ಸ್: 113
►ಕರ್ನಾಟಕ ಮೊದಲ ಇನಿಂಗ್ಸ್: 186
►ಮಹಾರಾಷ್ಟ್ರ ಎರಡನೇ ಇನಿಂಗ್ಸ್: 97 ಓವರ್‌ಗಳಲ್ಲಿ 256
(ಋತುರಾಜ್ ಗಾಯಕ್ವಾಡ್ 89,ನೌಶಾದ್ ಶೇಕ್ 73, ಸತ್ಯಜೀತ್ 28, ಎಸ್.ಗೋಪಾಲ್ 4-64,ವಿನಯ್‌ಕುಮಾರ್ 3-41, ಪವನ್ ದೇಶಪಾಂಡೆ 2-23)
►ಕರ್ನಾಟಕ ಎರಡನೇ ಇನಿಂಗ್ಸ್:
70.2 ಓವರ್‌ಗಳಲ್ಲಿ 184/3
(ದೇವದತ್ತ್ ಪಡಿಕ್ಕಲ್ 77, ನಿಶ್ಚಲ್ 61, ಅಬ್ಬಾಸ್ ಔಟಾಗದೆ 34; ಸತ್ಯಜೀತ್ 56ಕ್ಕೆ 2, ಖುರಾನ 53ಕ್ಕೆ 1)







