ಜಪಾನ್ ಲೀಗ್‌ನಲ್ಲಿ ಆಡಲಿರುವ ಡೇವಿಡ್ ವಿಲ್ಲ

ಟೋಕಿಯೊ, ಡಿ.1: ಸ್ಪೇನ್‌ನ ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿರುವ ಡೇವಿಡ್ ವಿಲ್ಲಾ ಮುಂದಿನ ದಿನಗಳಲ್ಲಿ ತಾನು ಜಪಾನ್‌ನ ಫುಟ್‌ಬಾಲ್ ಲೀಗ್‌ನಲ್ಲಿ ವಿಸೆಲ್ ಕೋಬೆ ಪರ ಆಡುವುದಾಗಿ ಘೋಷಿಸಿದ್ದಾರೆ.
ಇದೇ ತಂಡದಲ್ಲಿ ಆ್ಯಂಡ್ರೆಸ್ ಇನಿಯೆಸ್ಟ ಕೂಡಾ ಆಡುತ್ತಿದ್ದು , ಇವರಿಬ್ಬರು ಈ ಹಿಂದೆ ಒಂದೇ ತಂಡದಲ್ಲಿ ಆಡುತ್ತಿದ್ದವರು. ಮತ್ತೊಮ್ಮೆ ಇನಿಯೆಸ್ಟ ಜೊತೆ ಆಡುವ ಅವಕಾಶದಿಂದ ರೋಮಾಂಚಿತನಾಗಿದ್ದೇನೆ. ಹೋಲ (ಹುರ್ರೇ)ಜಪಾನ್, ಹೋಲ ವಿಸೆಲ್ ಕೋಬೆ ಎಂದು ವಿಲ್ಲಾ ಟ್ವೀಟ್ ಮಾಡಿದ್ದಾರೆ.
ಜಪಾನ್‌ನ ಬಿಲಿಯನೇರ್ ತಂತ್ರಜ್ಞಾನ ಉದ್ಯಮಿ ಹಿರೋಶಿ ಮಿಕಿಟನಿ ಒಡೆತನದ ವಿಸೆಲ್ ಕೋಬೆ ತಂಡದ ಜೆರ್ಸಿಯನ್ನು 36 ವರ್ಷದ ಆಟಗಾರ ವಿಲ್ಲಾಗೆ ಹಸ್ತಾಂತರಿಸಲಾಗಿದೆ. ಸ್ಪಾನಿಷ್ ನ್ಯಾಷನಲ್ ಲೀಗ್ ಟೂರ್ನಿಯಲ್ಲಿ ಬಾರ್ಸೆಲೋನಾ ಮತ್ತು ವಲೆನ್ಶಿಯಾ ತಂಡದ ಪರ ಆಡಿದ್ದ ವಿಲ್ಲಾ, ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಶ್ರೇಯ ಪಡೆದ ವಿಲ್ಲಾ 2014ರಲ್ಲಿ ನ್ಯೂಯಾರ್ಕ್ ಸಿಟಿ ತಂಡವನ್ನು ಸೇರಿದ್ದರು.
Next Story





