Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಬುಧಾಬಿ: 'ಡಿಯರ್ ಬಿಗ್ ಟಿಕೆಟ್'...

ಅಬುಧಾಬಿ: 'ಡಿಯರ್ ಬಿಗ್ ಟಿಕೆಟ್' ಸ್ಪರ್ಧೆ ವಿಜೇತರಾದ ಹನೀಫ್ ಪುತ್ತೂರು

ರಶೀದ್ ವಿಟ್ಲ.ರಶೀದ್ ವಿಟ್ಲ.2 Dec 2018 1:12 PM IST
share
ಅಬುಧಾಬಿ: ಡಿಯರ್ ಬಿಗ್ ಟಿಕೆಟ್ ಸ್ಪರ್ಧೆ ವಿಜೇತರಾದ ಹನೀಫ್ ಪುತ್ತೂರು

ಯುಎಇಯ ಅಬುಧಾಬಿ ಡ್ಯೂಟಿ ಫ್ರೀ, ಏಷ್ಯಾನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ 'ಡಿಯರ್ ಬಿಗ್ ಟಿಕೆಟ್' ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಪುತ್ರ ಮುಹಮ್ಮದ್ ಹನೀಫ್ ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದಾರೆ.

ಹನೀಫ್ ಪುತ್ತೂರು ಅವರು ದುಬೈ ಯುನಿವರ್ಸಿಟಿಯ ಮುಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್'ನಲ್ಲಿ ಸಾಫ್ಟ್'ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಟ್ರಸ್ಟ್'ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಿಯರ್ ಬಿಗ್ ಟಿಕೆಟ್ ಸಂಸ್ಥೆಯು ಕಳೆದ ಸೆಪ್ಟಂಬರ್ ತಿಂಗಳಲ್ಲಿ "ನಿಮ್ಮ ಕನಸು ನನಸು ಮಾಡುತ್ತೇವೆ." ಎಂಬ ಸ್ಪರ್ಧೆ ಏರ್ಪಡಿಸಿತು. ಹನೀಫ್ ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಗೆ ಅರ್ಜಿ ಹಾಕಿದ್ದರು. ಒಂದು ಮೊಬೈಲ್ ಬಸ್'ಗೆ 2 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟಿದ್ದರು.

ವಿವಿಧ ಕನಸುಗಳನ್ನು ಹೊತ್ತು ಯುಎಇಯಲ್ಲಿ ನೆಲೆಸಿರುವ ವಿವಿಧ ರಾಷ್ಟ್ರಗಳ ಸುಮಾರು 8,000 ಮಂದಿ ಸ್ಪರ್ಧೆಗಿಳಿದರು. ಅದರಲ್ಲಿ ಹೃದಯ ತಟ್ಟುವ ಯೋಜನೆ, ಕನಸುಗಳನ್ನು ಹೊಂದಿರುವ ಟಾಪ್ 20 ಮಂದಿಯನ್ನು 'ಡಿಯರ್ ಬಿಗ್ ಟಿಕೆಟ್' ಸಂಸ್ಥೆ ಆಯ್ಕೆ ಮಾಡಿ ತನ್ನ ವೆಬ್'ಸೈಟ್ ಮೂಲಕ ಸಾರ್ವಜನಿಕ ಆನ್'ಲೈನ್ ಮತದಾನಕ್ಕೆ ಹಾಕಿತು. ಟಾಪ್ 20ರಲ್ಲಿ ಹನೀಫ್ ಪುತ್ತೂರು ಕೂಡಾ ಸ್ಥಾನ ಗಳಿಸಿದ್ದರು. 1,30,000 ಮಂದಿ ಆನ್'ಲೈನ್ ಓಟ್ ಮಾಡಿದ್ದು, ಟಾಪ್ 5 ವಿಜೇತರನ್ನು ಸಂಸ್ಥೆಯು ಆಯ್ಕೆ ಮಾಡಿ ಆ 5 ಜನರ ಕನಸನ್ನು ಈಡೇರಿಸುವ ಭರವಸೆ ನೀಡಿದೆ. 5 ಜನ ವಿಜೇತರಲ್ಲಿ ಭಾರತದ ಹನೀಫ್ ಪುತ್ತೂರು ಕೂಡಾ ಒಬ್ಬರು.

ಹನೀಫ್ ಅವರಿಗೆ ಅತ್ಯಧಿಕ ಆನ್'ಲೈನ್ ಮತಗಳು ಸಿಕ್ಕಿವೆ ಹಾಗೂ ಅವರ ಕನಸಿನ ಯೋಜನೆ ಸಂಸ್ಥೆಗೆ ಹಿಡಿಸಿವೆ. 'ಡಿಯರ್ ಬಿಗ್ ಟಿಕೆಟ್'ನ ನಿರ್ದೇಶಕರಲ್ಲೊಬ್ಬರಾದ ರಿಚರ್ಡ್ ಅವರು ಹನೀಫ್ ಅವರ ಫಲಿತಾಂಶವನ್ನು ಪ್ರಕಟಿಸಿದರು. ಅವರ ಯೋಜನೆಗೆ ಎಷ್ಟು ಮೊತ್ತ 'ಡಿಯರ್ ಬಿಗ್ ಟಿಕೆಟ್' ನೀಡುತ್ತದೆ ಎನ್ನುವುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಒಂದು ವಾರದಲ್ಲಿ ಎಲ್ಲವೂ ತಿಳಿಯುವ ನಿರೀಕ್ಷೆಯಿದೆ.

ಟಾಪ್ 5ರಲ್ಲಿ ಭಾರತದ ಹನೀಫ್ ಪುತ್ತೂರು ಅಲ್ಲದೇ ಅಬುಧಾಬಿಯಲ್ಲಿರುವ ಫಿಲಿಪ್ಪೀನ್ಸ್'ನ ಆಲನ್ ರೇಕ್ಸಿ ಫೋರ್ಟಸ್, ದುಬೈಯಲ್ಲಿರುವ ಭಾರತೀಯಳಾದ ಸುವರ್ಣ ಸನಲ್ ಕುಮಾರ್, ದುಬೈಯಲ್ಲಿರುವ ಫಿಲಿಪ್ಪೀನ್ಸ್'ನ ರಾವುಲ್ ಗಾರ್ಸಿಯಾ, ಶಾರ್ಜಾದಲ್ಲಿರುವ ಕೇನ್ಯಾದ ಸಾರಾ ಖಾಲಿದ್ ಅವರು 'ಡಿಯರ್ ಬಿಗ್ ಟಿಕೆಟ್' ವಿಜೇತರಾಗಿದ್ದಾರೆ.

share
ರಶೀದ್ ವಿಟ್ಲ.
ರಶೀದ್ ವಿಟ್ಲ.
Next Story
X