ಬಂಟಕಲ್ಲು: ಆರೋಗ್ಯ ತಪಾಸಣೆ, ಮಾಹಿತಿ ಕಾರ್ಯಕ್ರಮ

ಶಿರ್ವ, ಡಿ.2: ದೈನಂದಿನ ಎಲ್ಲ ಕೆಲಸಗಳು ಉತ್ತಮವಾಗಿ ನಡೆಯಬೇಕಾದರೆ ನಮ್ಮ ಆರೋಗ್ಯ ಸರಿಯಾಗಿರಬೇಕು. ಆರೋಗ್ಯ ತಪಾಸಣೆಯನ್ನು ಮಾಡು ವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಆರೋಗ್ಯ ಭಾಗ್ಯವೇ ಇತರ ಸೌಭಾಗ್ಯಗಳಿಗೆ ಪೂರಕ ಎಂದು ರೋಟರಿ ಜಿಲ್ಲಾ ವಲಯ ಸಹಾಯಕ ಗವರ್ನರ್ ಕೆ.ಸೂರ್ಯಕಾಂತ್ ಶೆಟ್ಟಿ ಹೇಳಿದ್ದಾರೆ.
ಬಂಟಕಲ್ಲು ಜಯಸ್ಮತಿ ಆರೋಗ್ಯ ಟ್ರಸ್ಟ್ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ರವಿವಾರ ಬಂಟಕಲ್ಲು ಶ್ರೀಕೃಷ್ಣ ಛಾಯಾ ದಲ್ಲಿ ಆಯೋಜಿಸಲಾದ ಹಿರಿಯರ ಹಾಗೂ ಮಹಿಳೆಯರ ಆರೋಗ್ಯ ತಪಾ ಸಣೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್‌ಕುಮಾರ್ ಬೈಲೂರು, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಜಲಿ ವಾಗ್ಲೆ ಮಾತನಾಡಿದರು. ಅಧ್ಯಕ್ಷತೆಯನ್ನು ಜಯ ಸ್ಮತಿ ಆರೋಗ್ಯ ಟ್ರಸ್ಟ್ ಅಧ್ಯಕ್ಷೆ ಪ್ರಪುಲ್ಲಾ ಜಯಶೆಟ್ಟಿ ವಹಿಸಿದ್ದರು. ಶಿರ್ವ ಆರೋಗ್ಯಕೇಂದ್ರದ ವೈದ್ಯೆ ಡಾ.ಶೈನಿ, ಗೋವಿಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸ್ವಾಗತಿಸಿ ವಂದಿಸಿದರು. ಗೀತಾ ವಾಗ್ಲೆ ಕಾರ್ಯಕ್ರಮ ನಿರೂಪಿಸಿದರು.