ದಲಿತ ಭಾರತದಲ್ಲಿ ನೋವುಗಳೇ ಮೇಲೈಸುತ್ತವೆ: ಡಾ. ಪುಷ್ಪಾ ಅಮರೇಶ್

ಮಂಗಳೂರು, ಡಿ.2: ದೇಶದಲ್ಲಿ ಅವಕಾಶ ವಂಚಿತರ, ಶೋಷಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇವರೆಲ್ಲರನ್ನೂ ದಲಿತ ಪರಿಭಾವನೆಯೊಳಗೆ ಸೇರಿಸುವಾಗ ‘ದಲಿತ ಭಾರತ’ದಲ್ಲಿ ನೋವುಗಳೇ ಮೇಲೈಸುವುದನ್ನು ಕಾಣಬಹುದಾಗಿದೆ ಎಂದು ಡಾ. ಪುಷ್ಪಾ ಅಮರೇಶ್ ಹೇಳಿದರು.
‘ಜನನುಡಿ’ಯ ‘ದಲಿತ ಭಾರತ: ಸಂವಾದಗೋಷ್ಠಿ’ಯಲ್ಲಿ ಮಾತನಾಡಿದ ಅವರು ಹಿಂದುತ್ವದಲ್ಲಿ ಅಂಧತ್ವದಲ್ಲಿ ಮುಳುಗಿದವರಿಗೆ ದಲಿತರ ನೋವು ಅರ್ಥವಾಗುವುದಿಲ್ಲ. ದೇಶದ ಮೂಲೆ ಮೂಲೆಗಳಲ್ಲೂ ಕೂಡಾ ದಲಿತರ ಬಗೆಗೆ ಅಸ್ಪಶ್ಯತೆಯ ನಂಜು ಇನ್ನೂ ಇದೆ. ದಲಿತರು ಹಿಂಸೆ, ಹಸಿವು, ಶೋಷಣೆ, ಅಸಮಾನತೆಯಲ್ಲದೆ ಬದುಕಿಗೆ ದಾರಿ ಹುಡುಕಲಾಗದ ದುಸ್ಥಿತಿಯಲ್ಲಿದ್ದಾರೆ. ಆದಿವಾಸಿ ಭಾರತ, ಶೂದ್ರ ಭಾರತ, ದಲಿತ ಭಾರತವನ್ನು ಮರೆತು ಹುಸಿದೇಶಪ್ರೇಮದ ಹಿಂದುತ್ವದ ಭಾರತವನ್ನು ಕಾಣುತ್ತಿರುವುದು ದುರಂತವಾಗಿದೆ ಎಂದರು.
ರವಿಕುಮಾರ್ ಟೆಲೆಕ್ಸ್ ವಿಚಾರ ಮಂಡಿಸಿದರು. ಡಾ. ಎಂ. ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
Next Story