ಪೋಕ್ಸೊ ಪ್ರಕರಣ: ಪತ್ರಕರ್ತನ ವಿರುದ್ಧ ಮತ್ತೆ ಐದು ಕೇಸು
ಕುಂದಾಪುರ, ಡಿ.2: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧಿತನಾಗಿರುವ ಕುಂದಾಪುರದ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ(40) ವಿರುದ್ಧ ಇಂದು ಮತ್ತೆ ಐದು ಸೇರಿದಂತೆ ಒಟ್ಟು 21 ಪ್ರಕರಣ ಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಆರೋಪಿ ವಿರುದ್ಧ ನಿನ್ನೆಯವರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ 14, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣಗಳು ದಾಖಲಾಗಿತ್ತು. ಇಂದು ಮತ್ತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಎರಡು, ಗಂಗೊಳ್ಳಿ ಠಾಣೆಯಲ್ಲಿ ಎರಡು ಹಾಗೂ ಕೊಲ್ಲೂರು ಠಾಣೆಯಲ್ಲಿ ಒಂದು ಪೋಕ್ಸೊ ಕಾಯಿದೆಯಡಿ ಪ್ರಕರಣ ಗಳು ದಾಖಲಾಗಿವೆ.
ಬೈಂದೂರು ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿ ಚಂದ್ರ ಹೆಮ್ಮಾಡಿಯ ಮೂರು ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಇಂದಿಗೆ ಮುಗಿದಿದ್ದು, ನಾಳೆ ಬೆಳಗ್ಗೆ ಆರೋಪಿಯನ್ನು ಉಡುಪಿ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story