ಕೆನಡಾ-ದ.ಆಫ್ರಿಕ ಪಂದ್ಯ ಡ್ರಾ

ಭುವನೇಶ್ವರ, ಡಿ.2: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ರವಿ ವಾರ ನಡೆದ ‘ಸಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಕೆನಡಾ ಹಾಗೂ ದಕ್ಷಿಣ ಆಫ್ರಿಕ ತಂಡಗಳು 1-1 ರಿಂದ ಡ್ರಾ ಮಾಡಿಕೊಂಡಿವೆ.
ವಿಶ್ವದ ನ.11ನೇ ತಂಡ ಕೆನಡಾ ಹಾಗೂ ವಿಶ್ವದ ನಂ.15ನೇ ತಂಡ ದಕ್ಷಿಣ ಆಫ್ರಿಕ ಮೊದಲೆರಡು ಕ್ವಾರ್ಟರ್‌ನಲ್ಲಿ ತೀವ್ರ ಪೈಪೋಟಿ ನಡೆಸಿದವು. ಉಭಯ ತಂಡಗಳು ಪರಸ್ಪರ ಗೋಲು ಬಾರಿಸಲು ಅವಕಾಶ ನೀಡದಹಿನ್ನೆಲೆಯಲ್ಲಿ ಮೊದಲಾರ್ಧದ ಪಂದ್ಯ ಗೋಲುರ ಹಿತವಾಗಿ ಕೊನೆಗೊಂಡಿತು.
ದಕ್ಷಿಣ ಆಫ್ರಿಕ 43ನೇ ನಿಮಿಷ ದಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಎನ್‌ಖೊಬೈಲ್ ಎನ್‌ಟುಲಿ ಆಫ್ರಿಕದ ಪರ ಫೀಲ್ಡ್ ಗೋಲು ಬಾರಿಸಿದರು. ಆದರೆ, ದಕ್ಷಿಣ ಆಫ್ರಿಕ ಪಾಳ ಯದಲ್ಲಿ ಮುನ್ನಡೆಯ ಸಂಭ್ರಮ ಹೆಚ್ಚುಹೊತ್ತು ಉಳಿಯಲಿಲ್ಲ. 45ನೇ ನಿಮಿಷ ದಲ್ಲಿ ಗೋಲು ಬಾರಿಸಿದ ಕೆನಡಾ 1-1 ರಿಂದ ಸಮಬಲ ಸಾಧಿಸಿತು. ದ.ಆಫ್ರಿಕ ಎದುರಾಳಿ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ನೀಡಿತು. ಕೆನಡಾ ನಾಯಕ ಸ್ಕಾಟ್ ಟ್ಯುಪರ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಂದ್ಯವನ್ನು ಸಮಬಲಕ್ಕೆ ತಂದರು.
ಆ ಬಳಿಕ ಕೆನಡಾ ಹಾಗೂ ದಕ್ಷಿಣ ಆಫ್ರಿಕ ಗೆಲುವಿನ ಗೋಲ್‌ಗಾಗಿ ತೀವ್ರ ಹೋರಾಟ ನಡೆಸಿದವು. ಆದರೆ, ಎರಡೂ ತಂಡಗಳಿಗೆ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾನಲ್ಲಿ ಕೊನೆಗೊಂಡ ಕಾರಣ ಎರಡೂ ತಂಡಗಳು ನಾಕೌಟ್ ಹಂತಕ್ಕೇರಲು ತಮ್ಮ ಬೇಟೆಯನ್ನು ಮುಂದುವರಿಸಿವೆ.





