ಪತ್ರಿಕೆ
![ಪತ್ರಿಕೆ ಪತ್ರಿಕೆ](https://www.varthabharati.in/sites/default/files/images/articles/2018/12/3/166191.jpg)
‘‘ಆ ಪತ್ರಿಕೆ ತುಂಬಾ ಚೆನ್ನಾಗಿದೆ’’
‘’ಹೌದೆ?’’
‘‘ಹೌದು, 40 ಪುಟಗಳು...’’
‘‘ಮತ್ತೆ...’’
‘‘ಎಲ್ಲವೂ ಬಣ್ಣ ಬಣ್ಣದ ಪುಟ’’
‘‘ಮತ್ತೆ....’’
‘‘ಗುಣಮಟ್ಟದ ಕಾಗದ....’’
‘‘ಮತ್ತೆ....’’
‘‘ಬೆಳಗ್ಗೆ ಐದು ಗಂಟೆಗೆ ಮನೆ ಬಾಗಿಲಿಗೆ...’’
‘‘ಮತ್ತೆ...’’
‘‘ಬೆಲೆ ಬರೇ ಎರಡು ರೂಪಾಯಿ....’’
‘‘ಮತ್ತೆ...’’
‘‘ಮತ್ತೇನು?’’
‘‘ನಿನ್ನೆ ನಮ್ಮೂರ ರೈತ ಸಾಲಗಾರನಾಗಿ ಆತ್ಮಹತ್ಯೆ ಮಾಡಿಕೊಂಡನಲ್ಲ...ಆ ನಲವತ್ತು ಪುಟಗಳಲ್ಲಿ ಆತನ ಸುದ್ದಿಯೇ ಇರಲಿಲ್ಲ ಯಾಕೆ?’’
‘‘ಇಷ್ಟೆಲ್ಲ ಕೊಟ್ಟ ಮೇಲೆ ಸುದ್ದಿಯೂ ಕೊಡಬೇಕೆಂದರೆ ಹೇಗೆ?’’
Next Story