ಕಾಪು: ಅಂತರಜಿಲ್ಲಾ ಚೆಸ್‌ಕ್ರೀಡಾ ಕೂಟಕ್ಕೆ ಚಾಲನೆ

ಕಾಪು, ಡಿ.2: ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಮತ್ತು ಕಾಪು ಕಲಾಭಿಮಾನಿ ಸಂಘಗಳ ಜಂಟಿ ಆಶ್ರಯದಲ್ಲಿ ಅಂತರಜಿಲ್ಲಾ ಚೆಸ್ ಕ್ರೀಡಾ ಕೂಟಕ್ಕೆ ಕಾಪುವಿನಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಣಿಪಾಲ ಮಾಹೆಯ ಅಸೋಸಿಯೇಟ್ ಡೀನ್ ಮತ್ತು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ರಾಜಗೋಪಾಲ್ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರವಂತ ಪ್ರಜೆಗಳಾಗಲು ಅವರಲ್ಲಿ ಶಿಸ್ತು ಸಂಯಮ ಹಾಗು ಆಯ್ಕೆ ಮಾಡಿದ ಯಾವುದೇ ವಿಷಯದಲ್ಲಿ ಶ್ರದ್ದೆ ಇರಬೇಕು. ಇದನ್ನು ಅವರಲ್ಲಿ ಜಾಗ್ರತ ಗೊಳಿಸುವಲ್ಲಿ ಹೆತ್ತವರು ಮಹತ್ವಪೂರ್ಣ ಪಾತ್ರವನ್ನು ವಹಿಸಬೇಕಾಗುತ್ತದೆ ಎಂದರು.
ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮೂಡಬಿದ್ರೆ ಯೆನ ಪೋಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜೆ.ಡಿಸೋಜ ಮಾತ ನಾಡಿ, ಚದುರಂಗ ಕ್ರೀಡೆಯಲ್ಲಿ ಪ್ರತಿಕ್ಷಣವೂ ಸವಾಲುಗಳೆ ತುಂಬಿದ್ದು ಅವು ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಮುನ್ನಡಿಯಿಟ್ಟಾಗಲೇ ಸಾಧನೆಗಳನ್ನು ಮಾಡಲು ಸಾದ್ಯ ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಮಾತನಾಡಿ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಚೆಸ್ ಪಟು ಗಳಿಗೆ 10 ಸಾವಿರ ರೂ. ನಗದು ಪ್ರೋತ್ಸಾಹ ಧನವನ್ನು ರಾಜ್ಯ ಕ್ರೀಡಾ ಇಲಾಖೆ ಯಿಂದ ನೀಡಲಾಗುತ್ತದೆ. ಅದೇ ರೀತಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಸಾದನೆಗಳನ್ನು ಮಾಡಿದ ರಾಜ್ಯದ ಚೆಸ್ ಆಟಗಾರರಿಗೆ ನಗದು ರೂಪದಲ್ಲಿ ಪ್ರೋತ್ಸಾಹ ಧನಗಳನ್ನು ನೀಡಲಾಗುತ್ತದೆಂದು ತಿಳಿಸಿದರು.
ಸಂಸ್ಥೆಯ ಪದಾಧಿಕಾರಿ ಶಂಕರ್, ಮಂಗಳೂರು ಸಾಮ್ರಾಟ್ ಚೆಸ್ ಘಟಕದ ಕಾರ್ಯದರ್ಶಿ ನಾಗೇಶ್ ಕಾರಂತ್, ಅಸೋಸಿಯೇಶನ್ ಪ್ರಧಾನ ಕಾರ್ಯ ದರ್ಶಿ ಮತ್ತು ಮುಖ್ಯ ತೀರ್ಪುಗಾರ ಬಾಬು ಪೂಜಾರಿ, ಕಾರ್ಯಕ್ರಮ ನಿರ್ದೇ ಶಕರುಗಳಾದ ಸಾಕ್ಷಾತ್ ಯು.ಕೆ., ಶೇಖರ್ ಸಾಲಿಯಾನ್, ಶ್ರವಣ್ ಪೂಜಾರಿ, ಶ್ರಾವಣ್ಯ, ಶಂಕರ್ ಸುವರ್ಣ, ವೈ.ಸಿ.ಆಚಾರ್ಯ, ಮಂ ಜುನಾಥ್ ಮಣಿಪಾಲ ಉಪಸ್ಥಿತರಿದ್ದರು.
ಕಲಾಭಿಮಾನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಸ್ವಾಗತಿಸಿದರು. ಕ್ರೀಡಾಕೂಟದ ಸಂಯೋಜಕ ಉಮಾನಾಥ್ ಕಾಪು ವಂದಿಸಿದರು. ಸೌಂದರ್ಯ ಕಾರ್ಯಕ್ರಮ ನಿರೂಪಿಸಿದರು.