ಭಾರತ ನನ್ನ ತಂದೆಯ ದೇಶ: ಆದಿತ್ಯನಾಥ್ ಗೆ ತಿರುಗೇಟು ನೀಡಿದ ಉವೈಸಿ
ಹೈದರಾಬಾದ್,ಡಿ.3: ‘‘ಭಾರತ ನನ್ನ ತಂದೆಯ ದೇಶ. ಯಾರೂ ನನ್ನನ್ನು ಪಲಾಯನ ಮಾಡಲು ಒತ್ತಾಯಿಸುವುದಿಲ್ಲ’’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಒಂದು ವೇಳೆ ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ನಿಜಾಮ ಹೈದರಾಬಾದ್‌ನಿಂದ ಓಡಿ ಹೋದಂತೆ ಉವೈಸಿ ಕೂಡ ಪಲಾಯನ ಮಾಡಬೇಕಾಗುತ್ತದೆ ಎಂದು ಚುನಾವಣೆ ಪ್ರಚಾರದ ವೇಳೆ ಆದಿತ್ಯನಾಥ್ ಹೇಳಿಕೆ ನೀಡಿದ್ದರು.
‘‘ಪ್ರವಾದಿ ಆದಂ ಸ್ವರ್ಗದಿಂದ ಭೂಮಿಗೆ ಇಳಿದಾಗ ಭಾರತಕ್ಕೂ ಬಂದಿದ್ದರು ಎನ್ನುವುದು ನಮ್ಮ ಧಾರ್ಮಿಕ ನಂಬಿಕೆ. ಹೀಗಾಗಿ ಭಾರತ ನನ್ನ ತಂದೆಯ ದೇಶ. ಯಾರೂ ನನ್ನನ್ನು ಓಡಿಹೋಗಲು ಒತ್ತಾಯಿಸುವುದಿಲ್ಲ’’ ಎಂದು ಚುನಾವಣಾ ರ್ಯಾಲಿಯೊಂದರಲ್ಲಿ ಹೈದರಾಬಾದ್‌ನ ಸಂಸದ ಹೇಳಿದ್ದಾರೆ.
Next Story