ಮಂಗಳೂರು: ‘ಕನೆಕ್ಟ್- 2018’ ಸಾಮುದಾಯಿಕ ಸಮ್ಮಿಲನ ಉದ್ಘಾಟನೆ
* 12 ಹೆಣ್ಣು ಮಕ್ಕಳ ಆದರ್ಶ ವಿವಾಹ *ದಾರುಲ್ ಅಮಾನ್ ವಸತಿ ಯೋಜನೆಗೆ ಚಾಲನೆ

ಮಂಗಳೂರು, ಡಿ.3: ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಇಂದು ಆಯೋಜಿಸಿರುವ ‘ಕನೆಕ್ಟ್- 2018’ ಸಾಮುದಾಯಿಕ ಸಮ್ಮಿಲನ ಆರಂಭಗೊಂಡಿದೆ.
ಸೈಯದ್ ಎಪಿಎಸ್ ಹುಸೈನುಲ್ ಅಹ್ದಲ್ ಬಾಖವಿ ಉಪ್ಪಳ್ಳಿ ತಂಙಳ್ ದುಆಗೈದರು. ಮಅದಿನ್ ಅಕಾಡಮಿಯ ಅಧ್ಯಕ್ಷ ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಾಪುರಂ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ಸುನ್ನಿ ಕೋ ಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಖಾಝಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಸ್.ಪಿ.ಹಂಝ ಸಖಾಫಿ, ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಎನ್.ಕೆ.ಎಂ.ಶಾಫಿ ಸಅದಿ, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಡಾ.ಯು.ಟಿ.ಇಫ್ತಿಕಾರ್ ಅಲಿ, ಹಾಜಿ ಎಸ್.ಎಂ.ರಶೀದ್, ಹೈದರ್ ಪರ್ತಿಪ್ಪಾಡಿ, ಮುಮ್ತಾಝ್ ಅಲಿ, ಮಾಜಿ ಮೇಯರ್ ಕೆ.ಅಶ್ರಫ್, ಅಶ್ರಫ್ ಸಅದಿ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ 12 ಹೆಣ್ಣು ಮಕ್ಕಳ ಆದರ್ಶ ವಿವಾಹ ನಡೆಯಿತು. ‘ದಾರುಲ್ ಅಮಾನ್ ವಸತಿ’ ಯೋಜನೆ ಹಾಗೂ ಸುನ್ನಿ ವಧೂವರರ ಅನ್ವೇಷಣೆಯ ವೆಬ್ ಸೈಟಿಗೆ ಎ.ಪಿ.ಉಸ್ತಾದ್ ಚಾಲನೆ ನೀಡಿದರು
ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಶೇಖ್ ಬಾವಾ ಹಾಗೂ ಹಾಫಿಳ್ ದರ್ವೇಶ್ ಅಲಿಯವರನ್ನು ಸನ್ಮಾನಿಸಲಾಯಿತು.
ಕನೆಕ್ಟ್-2018 ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ಶೇಖ್ ಬಾವಾ ಮಂಗಳೂರು ಸ್ವಾಗತಿಸಿದರು. ಟೀಂ ನಿರ್ವಹಣಾ ಸಮಿತಿಯ ಸಂಚಾಲಕ ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ ದಫ್ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಶೀರ್ ಮಜೂರು, ಶಿಹಾನ್ ಉಳ್ಳಾಲ, ಮಿಹ್ರಾಜುದ್ದೀನ್ ರಝಾ ಶಿವಮೊಗ್ಗ ಅವರು ನಅತೇ ಶರೀಫ್ ಹಾಡಿದರು.