ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ- ನೌಕರರ ಥ್ರೋಬಾಲ್: ಮನಪಾ ಮಹಿಳಾ ತಂಡ ಪ್ರಥಮ

ಮಂಗಳೂರು, ಡಿ.3: ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ 10 ಮಹಾನಗರ ಪಾಲಿಕೆಗಳ ಮಹಿಳಾ ಅಧಿಕಾರಿ ನೌಕರರ ಥ್ರೋಬಾಲ್ ಪಂದ್ಯಾಟದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಿಳಾ ತಂಡ ಪ್ರಥಮ ಸ್ಥಾನ ಗಳಿಸಿದೆ.
ಟ್ರೋಫಿಯೊಂದಿಗೆ 50,000 ರೂ. ನಗದು ಬಹುಮಾನವನ್ನು ಪಡೆದಿರುವ ತಂಡವನ್ನು ಶಾಸಕ ಭರತ್ ಶೆಟ್ಟಿ, ಮೇಯರ್ ಭಾಸ್ಕರ್, ಉಪ ಮೇಯರ್ ಮುಹಮ್ಮದ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತ ಮುಹಮ್ಮದ್ ನಝೀರ್ ಸೇರಿದಂತೆ ಪಾಲಿಕೆ ಇತರ ಸದಸ್ಯರು ಹಾಗೂ ಸಿಬ್ಬಂದಿ ಮನಪಾ ಆವರಣದಲ್ಲಿಂದು ಅಭಿನಂದಿಸಿದರು.
Next Story