ಎಡಕುಮೇರಿ: ರೈಲಿನಿಂದ ಬಿದ್ದು ಕಾಸರಗೋಡಿನ ಯುವಕನ ಕೈ ತುಂಡು

ಸಕಲೇಶಪುರ, ಡಿ.3: ರೈಲಿನಿಂದ ಬಿದ್ದು ಯುವಕನೋರ್ವನ ಕೈ ತುಂಡಾಗಿರುವ ಘಟನೆ ತಾಲೂಕಿನ ಎಡಕುಮೇರಿ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ.
ಸುಮಾರು 30ರ ಹರೆಯದ ಕಾಸರಗೋಡು ಮೂಲದ ಜಾನಿ ರೈಲಿನಿಂದ ಬಿದ್ದ ವ್ಯಕ್ತಿಯಾಗಿದ್ದಾನೆ.
ಇಂದು ಮುಂಜಾನೆ 3:30ಕ್ಕೆ ಬೆಂಗಳೂರು- ಮಂಗಳೂರು ಪ್ರಯಾಣಿಕರ ರೈಲಿನಿಂದ ಜಾನಿ ಬಿದ್ದಿದ್ದು, ಬಲಗೈ ಮಣಿಕಟ್ಟಿನ ಭಾಗದಿಂದ ತುಂಡಾಗಿದೆ. ಹಣೆ ಮತ್ತು ಮುಖದ ಭಾಗಕ್ಕೂ ಗಾಯಗಳಾಗಿವೆ. ಮುಂಜಾನೆ 6 ಗಂಟೆಯ ಸಮಯದಲ್ಲಿ ರೈಲು ಮಾಸ್ಟರ್ ದೇವರಾಜ್ ರೈಲು ಹಳಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡು ಬಿದ್ದಿದ್ದ ಜಾನಿ ಪತ್ತೆಯಾಗಿದ್ದಾನೆ.
ಗಾಯಾಳುವನ್ನು ಇಲ್ಲಿಯ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಹಾಸನದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಜಾನಿ ಸ್ಪಷ್ಟವಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ. ಇದರಿಂದ ಅವರ ವಿಳಾಸ ಪತ್ತೆ ಸಾಧ್ಯವಾಗಿಲ್ಲ.
ಅವರ ಮೊಬೈಲ್ ಫೋನ್‌ಲ್ಲಿದ್ದ ನಂಬರ್‌ವೊಂದಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.ಆ ಬಳಿಕ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿರುವುದಾಗಿ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ.