ಡಿ.16: ಜನಾರ್ದನ ಆಚಾರ್ಯರಿಗೆ ಗುರುವಂದನೆ
ಉಡುಪಿ, ಡಿ.3: ತಾಂತ್ರಿಕ ಬ್ರಹ್ಮ ಎಂದು ಬಿರುದಾಂಕಿತ ಜನಾರ್ದನ ಆಚಾರ್ಯ ಅವರಿಗೆ ಗುರುವಂದನಾ ಮತ್ತು ಸನ್ಮಾನ ಕಾರ್ಯಕ್ರಮವನ್ನು ಡಿ.16ರಂದು ಸಂಜೆ 5ಗಂಟೆಗೆ ಪರ್ಕಳ ವಿಶ್ವೇಶ್ವರ ಸಭಾಭವನದಲ್ಲಿ ಆಯೋಜಿಸ ಲಾಗಿದೆ.
ಮಣಿಪಾಲದಲ್ಲಿ ಸ್ವಂತ ಟೆಕ್ನಿಕಲ್ ಸಂಸ್ಥೆಯನ್ನು ಹೊಂದಿರುವ ಇವರು, ಬಿಡಿಭಾಗ ತಯಾರಿ ಮತ್ತು ಕ್ಲಿಷ್ಟ ಯಂತ್ರಗಳ ರಿಪೇರಿಯಲ್ಲಿ ನೈಪುಣ್ಯವನ್ನು ಹೊಂದಿದ್ದಾರೆ. 85 ವರ್ಷ ವಯಸ್ಸಿನ ಜನಾರ್ದನ ಆಚಾರ್ಯ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದು, ಇವರಿಂದ ಉಪಕೃತರಾದ ಶಿಷ್ಯರು ಈ ಕಾರ್ಯ ಕ್ರಮವನ್ನು ಆಯೋಜಿಸುತ್ತಿದ್ದಾರೆಂದು ಕಾರ್ಯಕ್ರಮ ಸಂಯೋಜಕ ವಿಶ್ವೇಶ್ವರ ಪರ್ಕಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಆಡಳಿತ ನಿರ್ದೇಶಕ ಟಿ.ಸತೀಶ್ ಪೈ, ಮಣಿಪಾಲ ಕೋ-ಆಪ ರೇಟಿವ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಟಿ.ಅಶೋಕ್ ಪೈ, ವಿ.ರಾಮದಾಸ್ ಹೆಗ್ಡೆ ಪರ್ಕಳ, ನಗರಸಭಾ ಸದಸ್ಯೆ ಸುಮಿತ್ರಾ ನಾಯಕ್ ಭಾಗವಹಿಸಲಿರುವರು. ಬಳಿಕ ಪುಣ್ಯಕೋಟಿ ಯಕ್ಷ ನೃತ್ಯ ರೂಪಕ ಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಸದಸ್ಯರಾದ ರವೀಂದ್ರ, ವೌನೇಶ್ ಆಚಾರ್ಯ, ನರಸಿಂಹ ಶೇರಿಗಾರ್ ಉಪಸ್ಥಿತರಿದ್ದರು.