ಪವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಡಿ.10ರಂದು ಕೌನ್ಸಿಲಿಂಗ್
ಉಡುಪಿ, ಡಿ.3: 2017-18ನೇ ಸಾಲಿನ ಸರಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅರ್ಹರಾದ ಅಭ್ಯರ್ಥಿಗಳ 1:1 ಅನುಪಾತದ ಅಂತಿಮ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ವಿಶೇಷಾಧಿಕಾರಿ, ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು ಇವರು ಪ್ರಕಟಿಸಿದ್ದಾರೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಸಮಾಜ ಪಾಠ, ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿ.10ರ ಬೆಳಗ್ಗೆ 10:30ರಿಂದ ಅಪರಾಹ್ನ 1 ಗಂಟೆಯವರೆಗೆ ಹಾಗೂ ಆಂಗ್ಲ ವಿಷಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಪರಾಹ್ನ 2:30ರಿಂದ 5 ಗಂಟೆಯವರೆಗೆ ಉಪ ನಿರ್ದೇಶಕರ ಕಚೇರಿ, ಸಾ.ಶಿ.ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿ 1:1ರ ಪಟ್ಟಿಯಂತೆ ಅಭ್ಯರ್ಥಿಗಳ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸಂಬಂಧಿಸಿದ ಅ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಗಜೆಟಡ್ ಅಧಿಕಾರಿಯವರ ಧೃಡೀಕೃತ ಪ್ರತಿ, ತಮ್ಮ ಇತ್ತೀಚಿನ 2 ಭಾವಚಿತ್ರ ಗಳು, ಸ್ವವಿಳಾಸ ಮಾಹಿತಿ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯ ಮಾಹಿತಿ ಯೊಂದಿಗೆ ನಿಗದಿಪಡಿಸಿದ ದಿನದಂದು ಕೌನ್ಸಿಲಿಂಗ್‌ಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ ಸಂಖ್ಯೆ: 0820-2574878ನ್ನು ಸಂಪರ್ಕಿಸುವಂತೆ ಉಪ ನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.