ಮದರಸಗಳ ಮೂಲಕ ದೇಶಾಭಿಮಾನಿಗಳನ್ನು ರೂಪಿಸುವ ಶಿಕ್ಷಣ ನೀಡಲಾಗುತ್ತಿದೆ: ಮುಹಮ್ಮದ್ ಅಲಿ ಸಖಾಫಿ

ಬೆಳ್ತಂಗಡಿ, ಡಿ. 3: ಮದರಸಗಳ ಮೂಲಕ ಮಕ್ಕಳಿಗೆ ಎಳವೆಯಲ್ಲೇ ನೈತಿಕ ಶಿಕ್ಷಣ, ದೇಶಾಭಿಮಾನ ಹುಟ್ಟುಹಾಕುವ ಶಿಕ್ಷಣ ನೀಡಲಾಗುತ್ತಿದೆ. ಜಿಹಾದ್ ಮತ್ತು ಯುದ್ಧಕ್ಕೆ ಇಸ್ಲಾಂ ಎಲ್ಲೂ ಪ್ರಾಶಸ್ತ್ಯವನ್ನು ಕೊಡದೆ ವಿದ್ಯೆಗೆ ಮೊದಲ ಆದ್ಯತೆ ನೀಡಿದೆ ಎಂದು ಕೇರಳ ರಾಜ್ಯ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ನ್ಯಾಯಪೀಠ ಸದಸ್ಯ ಮುಹಮ್ಮದ್ ಅಲಿ ಸಖಾಫಿ ಮುಳ್ಳೂರ್‍ಕೆ ಹೇಳಿದರು.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ಜಿಲ್ಲಾ ಸಮ್ಮೇಳನದಲ್ಲಿ ಅವರು ಪ್ರಭಾಷಣ ನೀಡುತ್ತಿದ್ದರು. ಅರಿವು, ಪಾಂಡಿತ್ಯ, ವಿದ್ಯೆ ಮಾತ್ರ ಮನುಷ್ಯನನ್ನು ಅತೀ ಎತ್ತರಕ್ಕೆ ಕೊಂಡೊಯ್ಯುವ ಸಾಧನ. ಮದರಸಗಳಲ್ಲಿ ಸಿಗುವ ನೈತಿಕ ಶಿಕ್ಷಣ ಇಂದು ಅನೇಕ ರಾಷ್ಟ್ರಪ್ರೇಮಿಗಳನ್ನು ಈ ಸಮಾಜಕ್ಕೆ ಅರ್ಪಿಸಿದೆ ಎಂದು ಅವರು ವಿವರಿಸಿದರು.
ಅಧ್ಯಕ್ಷತೆಯನ್ನು ಎಸ್‍ಎಮ್‍ಎ ರಾಜ್ಯಾಧ್ಯಕ್ಷ ಮಲ್‍ಜಅ ಉಜಿರೆ ತಂಙಳ್ ವಹಿಸಿದ್ದರು.
ಮನ್‍ಶರ್ ಸಿಟಿಎಂ ತಂಙಳ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಉದ್ಘಾಟನೆ ನಡೆಸಿದರು. ಎನ್. ಆರ್ ಪುರದ ಹಝ್ರತ್ ಹಾಫೀಝ್ ನಾಸಿರ್ ಹುಸೈನ್ ರಝ್ವಿ ಹಾಸನ, ಡಾ. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು. ಸಮಾವೇಶಕ್ಕೂ ಮುನ್ನ ಚರ್ಚ್ ಕೂಡು ರಸ್ತೆಯಿಂದ ಮೈದಾನದವರೆಗೆ ನಡೆದ ಮೀಲಾದ್ ರ್ಯಾಲಿಯನ್ನು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಯ್ಯಿದ್ ಕಿಲ್ಲೂರು ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಮುರ, ಎಸ್.ಎಮ್ ಕೋಯ ತಂಙಳ್ ಉಜಿರೆ, ಸಯ್ಯಿದ್ ಸಲೀಂ ತಂಙಳ್ ಸಬರಬೈಲು, ಸಯ್ಯಿದ್ ವಾದಿ ಇರ್ಫಾನ್ ತಂಙಳ್, ಅಬ್ಬಾಸ್ ಮದನಿ ಉಜಿರೆ, ಸುನ್ನೀ ಫೈಝಿ, ಅಬ್ದುಲ್ ಖಾದರ್ ಹಾಜಿ ಉಜಿರ್‍ಬೊಟ್ಟು, ಗುಲ್‍ರೇಝ್ ಅಹಮ್ಮದ್ ರಝ್ವಿ, ಅಬ್ದುಲ್ ರಝಾಖ್ ಸಖಾಫಿ ಮಡಂತ್ಯಾರು, ಮುಹಮ್ಮದ್ ರಫಿ, ಅಬ್ಬೋನು ಮದ್ದಡ್ಕ, ಯಾಕೂಬ್ ಮುಸ್ಲಿಯಾರ್ ಪಣಕಜೆ, ಸಲೀಂ ಕನ್ಯಾಡಿ, ಖಲಂದರ್ ಪದ್ಮುಂಜ, ಶರೀಫ್ ಬೆರ್ಕಳ, ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರ್, ಇಕ್ಬಾಲ್ ಮಾಚಾರ್, ಅಬ್ದುಲ್ ರಹಿಮಾನ್ ಬಾಖವಿ ಜಾರಿಗೆಬೈಲು, ಪಿ.ಯು ಆಲಿಕುಂಞಿ ಸಖಾಫಿ ನಾವೂರು, ಕೆ.ಯು ಮುಹಮ್ಮದ್ ಸಖಾಫಿ ಮುಂಡಾಜೆ, ಸ್ವಾದಿಕ್ ಮಾಸ್ಟರ್, ಸ್ವಾಗತ ಸಮಿತಿ ಚೇರ್‍ಮೆನ್ ಎ.ಕೆ ಅಹಮ್ಮದ್ ನ್ಯೂಡೆಲ್ಮಾ, ಕೋಶಾಧಿಕಾರಿ ಎಂ.ಕೆ ಬದ್ರುದ್ದೀನ್ ಪರಪ್ಪು, ಅಶ್ರಫ್ ಹಿಮಮಿ ಉಜಿರೆ, ಎಸ್‍ಎಮ್‍ಎ ಕೋಶಾಧಿಕಾರಿ ಯೂಸುಫ್ ಸಾಜ ಕೆ.ಎ ಉಸ್ಮಾನ್ ಬಳೆಂಜ, ಅಬ್ದುಲ್ ಲತೀಫ್ ಗುರುವಾಯನಕೆರೆ, ಅಬೂಬಕರ್ ಮಲೆಬೆಟ್ಟು, ರಾಝಿಯುದ್ದೀನ್ ಸಬರಬೈಲು, ವಝೀರ್ ಬಂಗಾಡಿ, ಹಮೀದ್ ನೆಕ್ಕರೆ, ಅಬ್ಬಾಸ್ ಬಟ್ಲಡ್ಕ, ಉಮರ್‍ಕುಂಞಿ ನಾಡ್ಜೆ, ಕತ್ತಾರ್ ಮುಹಮ್ಮದ್‍ಕುಂಞಿ, ಅಬ್ದುಲ್ ಕರೀಂ ಗೇರುಕಟ್ಟೆ, ಉಪಸ್ಥಿತರಿದ್ದರು.
ಎಸ್‍ಎಮ್‍ಎ ಪುತ್ತೂರು ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಕನ್ವೀನರ್ ಅಶ್ರಫ್ ಸಖಾಫಿ ಮಾಡಾವು ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಮುಂಡಾಜೆ ವಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ಲಂಕಾ ವಿವಿ ಯಿಂದ ಡಾಕ್ಟರೇಟ್ ಪಡೆದ ಧಾರ್ಮಿಕ ವಿದ್ವಾಂಸ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಕಕ್ಕಿಂಜೆ, ಅಪೂರ್ವ ಸಂಘಟಕ ಸಯ್ಯಿದ್ ಮಲಜ್‍ಅ ತಂಙಳ್‍ರಿಗೆ, ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಾತಿಶಾ ಪುತ್ತೂರು ರಿಗೆ, ನಡ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಲೋಕ ಎಂಬ ಪ್ರಯೋಗಾಲಯ ಸ್ಥಾಪಿಸಿ ಕೀರ್ತಿವೆತ್ತ ಈ ಬಾರಿಯ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಯಾಕೂಬ್ ಮಾಸ್ಟರ್ ಕೊಯ್ಯೂರುರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿನಿ ಮರಿಯಂ ರಫಾನಾ ಸುಳ್ಯ ರನ್ನು ಸನ್ಮಾನಿಸಲಾಯಿತು.







