ಪುರುಷರ ವಾಲಿಬಾಲ್ ಪಂದ್ಯಾಕೂಟ ಉದ್ಘಾಟನೆ

ಉಡುಪಿ, ಡಿ.3: ಅಲೆವೂರು ಯುವಕ ಸಂಘ ರಾಮಪುರ ಇವರ ಆಶ್ರಯ ದಲ್ಲಿ ಅಲೆವೂರು ಮಹಿಳಾ ಸಂಘದ ಸಹಯೋಗದೊಂದಿಗೆ 4ನೇ ವರ್ಷದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಕೂಟವನ್ನು ಇತ್ತೀಚೆಗೆ ಅಲೆವೂರು ಸುಬೋಧಿನೀ ಶಾಲಾ ವಠಾರದಲ್ಲಿ ಏರ್ಪಡಿಸಲಾಗಿತ್ತು.
ಪಂದ್ಯಾಟವನ್ನು ಉಡುಪಿ ನಗರಸಭಾ ಸದಸ್ಯ ಕೃಷ್ಣರಾವ್ ಕೊಂಡಚ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಪಂ ಅ್ಯಕ್ಷ ದಿನಕರ್ ಬಾಬು ವಹಿಸಿದ್ದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ಗಳಾದ ಸಕರಾಮ ಶೆಟ್ಟಿ, ಉಮೇಶ್ ಜಿ.ಶೆಟ್ಟಿ, ಅಲೆವೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ಶಾಲಾ ಆಡಳಿತ ಮಂಡಳಿಯ ವಾರಿಜ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ರಮಾ ಜೆ.ರಾವ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಉಮೇಶ್ ಸೇರಿಗಾರ್ ಸ್ವಾಗತಿಸಿದರು. ಸುಧೀರ್ ಕುಮಾರ್ ವಂದಿಸಿದರು. ಶ್ಯಾಮರಾಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.