ಅಫ್ಘಾನ್ ಶಾಂತಿ ಮಾತುಕತೆಯಲ್ಲಿ ಸಹಕಾರ ಕೋರಿ ಇಮ್ರಾನ್ಗೆ ಟ್ರಂಪ್ ಪತ್ರ
ಇಸ್ಲಾಮಾಬಾದ್, ಡಿ. 3: ಅಫ್ಘಾನಿಸ್ತಾನ ಶಾಂತಿ ಮಾತುಕತೆಯಲ್ಲಿ ನೆರವು ನೀಡುವಂತೆ ಕೋರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಪತ್ರ ಬರೆದಿದ್ದಾರೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಫಾವದ್ ಚೌಧರಿ ಸೋಮವಾರ ಹೇಳಿದ್ದಾರೆ.
‘‘ಅಧ್ಯಕ್ಷ ಟ್ರಂಪ್ ಪತ್ರವೊಂದನ್ನು ಬರೆದಿದ್ದಾರೆ. ತಾಲಿಬಾನನ್ನು ಮಾತುಕತೆಯ ಮೇಜಿಗೆ ಕರೆತರುವಲ್ಲಿ ಅವರು ಪಾಕಿಸ್ತಾನದ ಸಹಕಾರವನ್ನು ಕೋರಿದ್ದಾರೆ’’ ಎಂದು ‘ರಾಯ್ಟರ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಚೌಧರಿ ತಿಳಿಸಿದರು.
Next Story