ಎಸ್ಸೆಸ್ಸೆಫ್ ಪಜೀರ್ ಶಾಖೆ: ನೂತನ ಪದಾಧಿಕಾರಿಗಳ ಆಯ್ಕೆ

ಉಸ್ಮಾನ್ ಜೋಗಿಬೆಟ್ಟು
ಕೊಣಾಜೆ, ಡಿ. 3: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಇದರ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಪಜೀರ್ ಶಾಖೆಯ ಮಹಾಸಭೆ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಉಸ್ಮಾನ್ ಪಜೀರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೂತನ ಅಧ್ಯಕ್ಷರಾಗಿ ಉಸ್ಮಾನ್ ಜೋಗಿಬೆಟ್ಟು, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಾಪಿಕಾಡ್ ಕೋಶಾಧಿಕಾರಿ ಕರೀಂ ಅಡ್ಕರೆ, ಉಪಾಧ್ಯಕ್ಷರಾಗಿ ಅಬೂ ಸ್ವಾಲಿಹ್ ಪಜೀರ್, ಇಕ್ಬಾಲ್ ಮದನಿ, ಜೊತೆ ಕಾರ್ಯದರ್ಶಿಗಳಾಗಿ ಎಸ್ ಎಚ್ ತೌಸೀಫ್, ಅಶ್ರಫ್ ಪಜೀರ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಶೀದ್ ಸಅದಿ ಇಮಾಮ್ ಮಸ್ಜಿದುಲ್ ಮದೀನ ನಡುಹಿತ್ಲು, ಎಸ್ ವೈ ಎಸ್ ಪಜೀರ್ ಬ್ರಾಂಚ್ ಅಧ್ಯಕ್ಷ ಬಶೀರ್ ನಡುಹಿತ್ಲು, ಕೊಣಾಜೆ ಸೆಕ್ಟರ್ ಅಧ್ಯಕ್ಷ ಜಲೀಲ್ ಆರ್ ಜಿ ನಗರ ಉಪಸ್ಥಿತರಿದ್ದರು.
ಇಕ್ಬಾಲ್ ಮದನಿ ಸ್ವಾಗತಿಸಿ, ಇಮ್ತಿಯಾಝ್ ಕಾಪಿಕಾಡ್ ವಂದಿಸಿದರು.
Next Story