ಡಿ.8: ಉದ್ಯಾವರ ವರಾಹ ತೀರ್ಥ ಸಂಸ್ಥಾನ ಮೇಲ್ಮಠ ಪರ್ಯಾಯ ಹಸ್ತಾಂತರ
ಉಡುಪಿ, ಡಿ.3: ಸೋದೆ ಮಠದ ವೃಂದಾವನಾಚಾರ್ಯರಿಂದ ಪ್ರವರ್ತಿತ, ವರಾಹತೀರ್ಥರಿಂದ ಸ್ಥಾಪಿತವಾಗಿ ದಿ.ಅಣ್ಣಯ್ಯಆಚಾರ್ಯರಿಂದ ಅಭಿವೃದ್ಧಿ ಪಡಿಸಿದ ವರಾಹತೀರ್ಥ ಸಂಸ್ಥಾನದಲ್ಲಿ ಪೂಜಾ ಕೈಂಕರ್ಯ ಪರ್ಯಾಯ ಅನುಕ್ರಮಣಿಕೆ ಡಿ. 8ರಂದು ಹಸ್ತಾಂತರಗೊಳ್ಳಲಿದೆ.
ಡಿ.8ರಂದು ದಿ.ಮುಖ್ಯಪ್ರಾಣ ಆಚಾರ್ಯರ ಮಕ್ಕಳಿಂದ, ದಿ.ಗೋಪಾಲಾಚಾರ್ಯ ರ ಪುತ್ರ ಉದ್ಯಾವರ ವಾದಿರಾಜ ಆಚಾರ್ಯರು ಮಧ್ವ ಖರಾರ್ಚಿತ, ಶ್ರೀದೇವರುಗಳ ಪೂಜಾ ಕೈಂಕರ್ಯವನ್ನು ವಹಿಸಿಕೊಳ್ಳಲಿದ್ದಾರೆ. ಮುಂದಿನ 3 ತಿಂಗಳ ಅವಧಿಯಲ್ಲಿ ಬರುವ ಧನುರ್ಮಾಸದ ವಿಶೇಷ ಪೂಜೆ, ಮಧ್ವನವಮಿ, ರಥಸಪ್ತಮಿ, ಭೀಷ್ಮಾಷ್ಠಮಿ ಪರ್ವಕಾಲದಲ್ಲಿ ವಿಶೇಷ ಪೂಜೆ ನೆರವೇರಲಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.
Next Story





