ನೇಣುಬಿಗಿದು ಯುವಕ ಆತ್ಮಹತ್ಯೆ
ಮಂಗಳೂರು, ಡಿ. 3: ನಗರದ ಮುಲ್ಲಕಾಡು ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮುಲ್ಲಕಾಡು ನಿವಾಸಿ ಸಂತೋಷ್ (32) ಮೃತಪಟ್ಟ ಯುವಕ.
ಈತ ಡಿ.1ರ ಮಧ್ಯಾಹ್ನ 2ಗಂಟೆಯಿಂದ ಡಿ.3ರ ಮಧ್ಯಾಹ್ನ 2ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ವಿಪರೀತ ಕುಡಿದ ಚಟವಿದ್ದು, ಇದೇ ಕಾರಣದಿಂದ ಇತ್ತೀಚೆಗೆ ಅಸೌಖ್ಯಕ್ಕೊಳಗಾಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಆರೋಗ್ಯದಲ್ಲಿ ಪದೇಪದೇ ಏರುಪೇರಾಗುತ್ತಿದ್ದ ಕಾರಣ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಈ ಕುರಿತು ಕಾವೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story