ಯುವತಿ ನಾಪತ್ತೆ

ಮಂಗಳೂರು, ಡಿ.3: ದಾವಣಗೆರೆ ಜಿಲ್ಲೆಯ ಹರಿಹರದಿಂದ ಬಸ್‌ನಲ್ಲಿ ನ. 27ರಂದು ಮಂಗಳೂರಿಗೆ ಆಗಮಿಸಿದ್ದ ಯುವತಿ ರೋಜಾ (21) ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕಾಣೆಯಾಗಿದ್ದಾರೆ.
ದಾವಣಗೆರೆಯಿಂದ ನ. 26ರಂದು ರಾತ್ರಿ ಹೊರಟಿದ್ದ ಯುವತಿ ನ. 27ರಂದು ಬೆಳಗ್ಗೆ ಮಂಗಳೂರಿನಲ್ಲಿ ಇಳಿಯುವ ವೇಳೆ ನಾಪತ್ತೆಯಾಗಿದ್ದಾಳೆ ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವತಿ ನಾಪತ್ತೆ ಬಗ್ಗೆ ಆಕೆಯ ಜತೆಗಿದ್ದವರು ಆಕೆಯ ಹೆತ್ತವರಿಗೆ ಮಾಹಿತಿ ನೀಡಿದ್ದರು. ಬಳಿಕ ವಿವಿಧೆಡೆ ಹುಡುಕಾಟ ನಡೆಸಿದ ಬಳಿಕ ಎಲ್ಲಿಯೂ ಪತ್ತೆಯಾಗದ ಕಾರಣ ಸೋಮವಾರ ಬರ್ಕೆ ಪೊಲೀಸ್ ಠಾಣೆಗೆ ಹೆತ್ತವರು ದೂರು ನೀಡಿದ್ದಾರೆ.
ಯುವತಿ ರೋಜಾ 5 ಅಡಿ ಎತ್ತರ, ಉದ್ದ ತಲೆ ಕೂದಲು, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಪತ್ತೆಯಾದಲ್ಲಿ ಬರ್ಕೆ ಪೊಲೀಸ್ ಠಾಣೆ (0824- 2220522)ಗೆ ಮಾಹಿತಿ ನೀಡಲು ಕೋರಲಾಗಿದೆ.
Next Story





