ಭೂಮಿಯ ಮೊದಲ ಚಿತ್ರವನ್ನು ರವಾನಿಸಿದ ಇಸ್ರೋದ ಹೈಸಿಸ್
ಬೆಂಗಳೂರು, ಡಿ.3: ನ.29ರಂದು ಬಾಹ್ಯಾಕಾಶಕ್ಕೆ ಉಡಾವಣೆಗೊಂಡ ದೇಶದ ಇತ್ತೀಚಿನ ಭೂ ನಿರೀಕ್ಷಣಾ ಉಪಗ್ರಹ ಹೈಸಿಸ್ ಗುಜರಾತ್‌ನ ಲಖಪತ್ ಪ್ರದೇಶದ ಭಾಗಗಳನ್ನೊಳಗೊಂಡ ತನ್ನ ಮೊದಲ ಚಿತ್ರವನ್ನು ರವಾನಿಸಿದೆ.
ಕೃಷಿ,ಮಣ್ಣಿನ ಸರ್ವೆ ಮತ್ತು ಪರಿಸರ ನಿಗಾ ಸೇರಿದಂತೆ ವ್ಯಾಪಕ ಕ್ಷೇತ್ರಗಳಲ್ಲಿ ಬಳಸಬಹುದಾದ ಹೈಸಿಸ್ ಚಿತ್ರವನ್ನು ರವಿವಾರ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಸ್ವೀಕರಿಸಿದೆ ಎಂದು ಇಸ್ರೋ ತಿಳಿಸಿದೆ. ಚಿತ್ರದ ಗುಣಮಟ್ಟದ ಬಗ್ಗೆ ಅದು ತೃಪ್ತಿಯನ್ನು ವ್ಯಕ್ತಪಡಿಸಿದೆ.
Next Story