ಕಾಸರಗೋಡು: ಸ್ಕೂಟರ್-ಟೂರಿಸ್ಟ್ ಬಸ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು
ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು, ಡಿ.4: ಸ್ಕೂಟರ್ ಮತ್ತು ಟೂರಿಸ್ಟ್ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟು, ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಕಳ್ನಾಡ್ ಸೇತುವೆ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಜೋನ್ (15) ಎಂದು ಗುರುತಿಸಲಾಗಿದ್ದು, ಅರ್ಜುನ್ ರಮೇಶ್ (15) ಮತ್ತು ಮುಬಶ್ಶಿರ್ (15) ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಚಟ್ಟಂಚಾಲ್ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಅವರು ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾಸರಗೋಡು ಕಡೆಗೆ ಆಗಮಿಸುತ್ತಿದ್ದ ಬಸ್ಸಿನ ನಡುವೆ ಅಪಘಾತ ನಡೆದಿದ್ದು, ರಸ್ತೆಗೆಸೆಯಲ್ಪಟ್ಟ ಮೂವರನ್ನು ಸ್ಥಳೀಯರು ಆಸ್ಪತೆಗೆ ಕೊಂಡೊಯ್ದರೂ ಜೋನ್ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬೇಕಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story