ರಾಮಕೃಷ್ಣ ಮಠದಲ್ಲಿ 'ಡಿ ಸ್ವಚ್ಛ ಸೋಚ್' ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು, ಡಿ.4: ನಗರದ ರಾಮಕೃಷ್ಣ ಮಠದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದಡಿ 5ನೆ ಹಂತದ ಡಿ ಸ್ವಚ್ಛ ಸೋಚ್ ಕಾರ್ಯಕ್ರಮಕ್ಕೆ ಬೋದಮಯಾನಂದಜಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಎಂಆರ್ ಪಿಎಲ್ ನ ಅಧಿಕಾರಿ ಬಿ.ಎಚ್.ವಿ. ಪ್ರಸಾದ್ ಚಾಲನೆ ನೀಡಿದರು.
ನಿಟ್ಟೆ ವಿವಿಯ ವಿಶಾಲ್ ಹೆಗ್ಡೆ ಉಪಸ್ಥಿತರಿದ್ದರು. ಮಂಗಳೂರು ರಾಮಕೃಷ್ಣ ಮಠದ ಜಿತಕಾಮಂನದಜಿ ಸ್ವಾಮೀಜಿ ಅಧ್ಯಕ್ಷ ತೆ ವಹಿಸಿ, ದಿಕ್ಸೂಚಿ ಭಾಷಣ ಮಾಡಿದರು. ಕಳೆದ ನಾಲ್ಕು ವರ್ಷಗಳ ಅಭಿಯಾನ ಜನರ ಸಹಕಾರದಲ್ಲಿ ಯಶಸ್ಸು ಕಂಡಿದೆ. 6000 ಕಾರ್ಯಕರ್ತರು ಸ್ವಚ್ಛ ಮಂಗಳೂರು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಜಿನಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ರಂಜನ್ ವಂದಿಸಿದರು.
Next Story