ಕಣ್ಣೂರು: ಗ್ಯಾಸ್ ಟ್ಯಾಂಕರ್ - ಸರಕಾರಿ ಬಸ್ ಢಿಕ್ಕಿ; ಇಬ್ಬರಿಗೆ ಗಾಯ

ಮಂಗಳೂರು, ಡಿ. 4: ಕಣ್ಣೂರು ಸಮೀಪದ ಕೊಡಕ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಮತ್ತು ಸರಕಾರಿ ಬಸ್ ನಡುವೆ ಅಪಘಾತ ನಡೆದಿದೆ.
ಅಪಘಾತದಿಂದ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿ.ಸಿ.ರೋಡ್ ನಿಂದ ಮಂಗಳೂರಿಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಹೆದ್ದಾರಿ ಪಕ್ಕ ನಿಂತಿದ್ದ ಶಾಲಾ ವಾಹನ ಹಠಾತ್ ತಿರುಗಿಸಿದ ವೇಳೆ ಟ್ಯಾಂಕರ್ ಚಾಲಕ ಬ್ರೇಕ್ ಹಾಕಿದ್ದು, ಈ ಸಂದರ್ಭ ಧರ್ಮಸ್ಥಳದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಹಿಂಬದಿಯಿಂದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
Next Story