ಸಮಾಜದಲ್ಲಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದು ಸಾಹಿತ್ಯದ ಮೂಲ ಉದ್ದೇಶ: ನಾ.ಡಿ.ಸೋಜ
ಮಂಗಳೂರು, ಡಿ. 4: ಸಮಾಜದಲ್ಲಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದು ಸಾಹಿತ್ಯದ ಮೂಲ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಕತೆಗಾರ, ಬರಹಗಾರ ತನ್ನ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಖ್ಯಾತ ಸಾಹಿತಿ, ಕಾದಂಬರಿಕಾರ ನಾ.ಡಿ ಸೋಜ ಪ್ರಸಕ್ತ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯ ಬಗ್ಗೆ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸಾಹಿತ್ಯ ಸಮಾಜದ ಜನರನ್ನು ಒಂದು ಗೂಡಿಸಬೇಕು ಹೊರತು ಸಂಬಂಧವನ್ನು ದೂರಮಾಡುವಂತಾಗಬಾರದು. ಸಾಹಿತಿಗೆ, ಬರಹಗಾರನಿಗೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲು ಸಾಧ್ಯವಾದಾಗ ಮಾತ್ರ ಆತನಿಂದ ಉತ್ತಮ ಸಾಹಿತ್ಯ ಕೃತಿಯನ್ನು ನಿರೀಕ್ಷಿಸಬಹುದು. ಇತ್ತೀಚಿನ ದಿನಗಳಲ್ಲಿ ಈ ರೀತಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿದೆಯೇನೊ? ಎನ್ನುವ ಭಾವನೆ ಇದೆ. ಸಾಹಿತಿಗಳನ್ನು ಆವರಿಸಿರುವ ಭಯವೂ ಇದಕ್ಕೆ ಒಂದು ಕಾರಣವಿರಬಹುದು. ಈ ರೀತಿಯ ಭಯದ ವಾತಾವರಣ ಬದಲಾಗಬೇಕಾಗಿದೆ. ಬರಹಗಾರರು ಈ ಮನೋಸ್ಥಿತಿಯಿಂದ ಹೊರಬರಬೇಕಾಗಿದೆ ಸಮಾಜದಲ್ಲಿನ ವಾತಾವರಣವೂ ಬದಲಾಗಬೇಕಾಗಿದೆ ಎಂದು ನಾ.ಡಿ ಸೋಜ ತಿಳಿಸಿದ್ದಾರೆ.