ತಾತ್ಕಾಲಿಕ ಮಾರುಕಟ್ಟೆ ಒಂದೇ ಸೂರಿನಲ್ಲಿರಲಿ: ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಆಗ್ರಹ
ಮಂಗಳೂರು, ಡಿ. 4: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೇಂದ್ರ ಮಾರುಕಟ್ಟೆಯನ್ನು ಪಿಪಿಪಿ ಮಾದರಿಯಲ್ಲಿ ಪುನರ್‌ನಿರ್ಮಾಣ ಮಾಡುವುದು ಸ್ವಾಗತಾರ್ಹ. ಅದಕ್ಕೂ ಮುನ್ನ ಪ್ರಸ್ತುತ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಎಲ್ಲ ವ್ಯಾಪಾರಸ್ಥರಿಗೆ ಒಂದೇ ಸೂರಿನಡಿ ಮೂಲಸೌಲಭ್ಯ ಹೊಂದಿರುವ ತಾತ್ಕಾಲಿಕ ಮಾರುಕಟ್ಟೆ ಒದಗಿಸಬೇಕು. ಎಲ್ಲ ಮೂಲ ಸೌಲಭ್ಯವಿರುವ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿದ ಬಳಿಕವೇ ಕೇಂದ್ರ ಮಾರುಕಟ್ಟೆಯಿಂದ ವ್ಯಾಪಾರಸ್ಥರನ್ನು ಸ್ಥಳಾಂತರಿಸಬೇಕು ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.
ಪ್ರಸುತ ಕೇಂದ್ರ ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ಹಣ್ಣು, ತರಕಾರಿಯ ರಖಂ ಮಂಡಿ 132, ಚಿಲ್ಲರೆ ಮಂಡಿ 342 ಹಾಗೂ 18 ಹೂ ಮಾರುವ ಅಂಗಡಿಗಳಿವೆ. ಬಟ್ಟೆ ಅಂಗಡಿ, ಅಲ್ಯೂಮಿನಿಯಂ ಪಾತ್ರೆ ಅಂಗಡಿ, ದಿನಸಿ, ಆಟಿಕೆ, ಸುಗಂಧ ದವ್ಯದ ಅಂಗಡಿ, ಕ್ಯಾಂಟೀನ್, ಶೌಚಾಲಯ ವ್ಯವಸ್ಥೆ ಇದೆ. ಹೆಚ್ಚಿನ ಅಂಗಡಿಗಳು ಮಹಾನಗರ ಪಾಲಿಕೆಯ ಪರವಾನಿಗೆ ಹೊಂದಿದ್ದು, ಮನಪಾಗೆ ಬಾಡಿಗೆ ಸಂದಾಯವಾಗುತ್ತಿದೆ. ಎಪಿಎಂಸಿಯಿಂದಲೂ ಪರವಾನಿಗೆ ಪಡೆದು ಮಾರುಕಟ್ಟೆ ಶುಲ್ಕ ಪಾವತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಎಂ. ಅಹಮ್ಮದ್ ಬಾವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
54 ವರ್ಷ ಇತಿಹಾಸವಿರುವ ಮಾರುಕಟ್ಟೆ ಶಾಂತಿ ಸಾಮರಸ್ಯ ಉಳಿಸಿಕೊಂಡು ಬಂದಿದೆ. ಇಲ್ಲಿನ ಅಂಗಡಿಗಳಲ್ಲಿ ಎಲ್ಲ ಮತ ಧರ್ಮಗಳಿಗೆ ಸೇರಿದ 1000ಕ್ಕೂ ಮುಕ್ಕಿ ಕಾರ್ಮಿಕರಿದ್ದಾರೆ. 300ಕ್ಕೂ ಅಕ ಕೂಲಿ ಕಾರ್ಮಿಕರಿದ್ದಾರೆ. ಈ ಮಾರುಕಟ್ಟೆ ಸ್ಥಳಾಂತರ ಮಾಡುವಾಗ ವ್ಯಾಪಾರಸ್ಥರ ಸಂಘದ ಅಭಿಪ್ರಾಯ ಪಡೆಯಬೇಕು. ಇಲ್ಲಿ 132 ವ್ಯಾಪಾರಸ್ಥರು ಮಾತ್ರ ಇರುವುದು ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತುಘಿ. ಇದು ತಪ್ಪು ಮಾಹಿತಿಯಾಗಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಮುಸ್ತಫಾ ಕುಂಞಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್, ಉಪಾಧ್ಯಕ್ಷೆ ಗ್ರೇಸಿ ೆರ್ನಾಂಡಿಸ್, ಕೋಶಾಧಿಕಾರಿ ಅಬ್ಬಾಸ್ ಎಲ್‌ಕೆಸಿ ಉಪಸ್ಥಿತರಿದ್ದರು.