ಪಣಂಬೂರು ಪೊಲೀಸರನ್ನು ಅಭಿನಂದಿಸಿದ ಎಂ.ಫ್ರೆಂಡ್ಸ್ ನಿಯೋಗ

ಮಂಗಳೂರು, ಡಿ. 4: ತೋಟಬೆಂಗ್ರೆ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಕರಾವಳಿಯಾದ್ಯಂತ ಪ್ರಶಂಸೆಗೆ ಪಾತ್ರರಾಗಿರುವ ಪಣಂಬೂರು ಪೊಲೀಸರನ್ನು ಮಂಗಳೂರು ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಪಣಂಬೂರು ಪೊಲೀಸ್ ಠಾಣೆಗೆ ತೆರಳಿದ ಎಂ.ಫ್ರೆಂಡ್ಸ್ ನಿಯೋಗ ಎಂ.ಫ್ರೆಂಡ್ಸ್ ಟ್ರಸ್ಟಿ ಹಾಗೂ ಪಣಂಬೂರು ಪೊಲೀಸ್ ನಿರೀಕ್ಷಕರಾದ ರಫೀಕ್ ಅವರನ್ನು ಸನ್ಮಾನಿಸಿತು.
ಗ್ಯಾಂಗ್ ರೇಪ್ ಭೇದಿಸಿದ ತಂಡದಲ್ಲಿದ್ದ ಪಣಂಬೂರು ಠಾಣೆ ಉಪನಿರೀಕ್ಷಕರಾದ ಉಮೇಶ್ ಕುಮಾರ್, ಎಎಸ್ಸೈ ಮುಹಮ್ಮದ್, ಹೆಡ್ ಕಾನ್ಸ್ ಟೇಬಲ್ ವಿಜಯ್ ಕಾಂಚನ್, ಕುಶಾಲ್ ಮಣಿಯಾಣಿ, ಸತೀಶ್, ಇಸಾಕ್, ಚಂದ್ರಹಾಸ್, ಶರಣ್ ಕಾಲಿ ಅವರನ್ನು ಅಭಿನಂದಿಸಲಾಯಿತು.
ಎಂ.ಫ್ರೆಂಡ್ಸ್ ನಿಯೋಗದಲ್ಲಿ ಅಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು, ಪ್ರದಾನ ಕಾರ್ಯದರ್ಶಿ ರಶೀದ್ ವಿಟ್ಲ, ಉಪಾಧ್ಯಕ್ಷ ಸುಜಾಹ್ ಮಹಮ್ಮದ್, ಕಾರ್ಯದರ್ಶಿ ಆರಿಫ್ ಪಡುಬಿದ್ರಿ ಉಪಸ್ಥಿತರಿದ್ದರು.
Next Story