ಆರ್‌ಎಸ್‌ಬಿ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ, ಡಿ.4: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಬಂಟಕಲ್ಲು ಕೇಂದ್ರ ಕಛೇರಿ ಮಣಿಪಾಲ ಇದರ ವತಿಯಿಂದ 2018-19ನೇ ಸಾಲಿನ ದತ್ತಿನಿಧಿ ಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಸುಮಾರು 1.68ಲಕ್ಷ ರೂ ವಿದ್ಯಾರ್ಥಿ ವೇತನವನ್ನು ಇತ್ತೀಚೆಗೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ವಿತರಿಸ ಲಾಯಿತು.
ಸಂಘದ ಅಧ್ಯಕ್ಷ ಪೆರ್ನಂಕಿಲ ಶ್ರೀಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೈತಬಂಧು ಗ್ರಾಮೋದ್ಯೋಗ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಶಿವಶಂಕರ ಎಸ್.ನಾಯಕ್, ವೇದಾಂತ ಲಿಮಿಟೆಡ್‌ನ ನಿವೃತ್ತ ಜನರಲ್ ಮೆನೇಜರ್ ಪಿ.ಗಣೇಶ ನಾಯಕ್ ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಹಾಗೂ ಪ್ರತಿ ಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಎಳ್ಳಾರೆ ಪಾಂಡುರಂಗ ಕಾಮತ್, ಕೋಶಾಧಿಕಾರಿ ರಾಮಕೃಷ್ಣ ನಾಯಕ್, ಗೌರವ ಸಲಹೆಗಾರ ಉಪೇಂದ್ರ ನಾಯಕ್, ಉಪಾಧ್ಯಕ್ಷ ಸಂತೋಷ್ ವಾಗ್ಲೆ, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್, ಲಕ್ಷ್ಮೀಪುರ ದೇವಳದ ಆಡಳಿತ ಮೊಕ್ತೇಸರ ರಘುರಾಮ ಪ್ರಭು, ಪುತ್ತೂರು ಸಂಘದ ಅಧ್ಯಕ್ಷ ಸುನಿಲ್ ಬೋರ್ಕಾರ್, ಉಡುಪಿ ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್, ವಿಜಯಲಕ್ಷ್ಮೀ, ಆತ್ರಾಡಿ ಗ್ರಾಪಂ ಅಧ್ಯಕ್ಷ ಗುರುನಂದ ನಾಯಕ್, ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಶಾರದಾ ವೈ., ಉದ್ಯಮಿ ಸುಬಾಶ್ಚಂದ್ರ ಸಾಂಕಳ್ಕರ್ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಎಂ.ಗೋಕುಲ್‌ದಾಸ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಸಂಘದ ಉಪಾಧ್ಯಕ್ಷ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಪಾಂಡುರಂಗ ಕಾಮತ್ ಎಳ್ಳಾರೆ ವಂದಿಸಿದರು. ಶಿಕ್ಷಕರಾದ ದೇವದಾಸ ಪಾಟ್ಕರ್ ಹಾಗೂ ರಾಮದಾಸ್ ್ರಭು ಕಾರ್ಯಕ್ರಮ ನಿರೂಪಿಸಿದರು.