ಶಿಥಿಲಾವಸ್ಥೆಯಲ್ಲಿರುವ ಮೊಡಂಕಾಪು ವಿದ್ಯಾರ್ಥಿ ನಿಲಯ: ತಾಪಂ ಅಧ್ಯಕ್ಷರ ನಿಯೋಗ ಭೇಟಿ ಪರಿಶೀಲನೆ

ಬಂಟ್ವಾಳ, ಡಿ. 4: ಪುರಸಭಾ ವ್ಯಾಪ್ತಿಯ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ವಿದ್ಯಾರ್ಥಿ ನಿಲಯವು ಶಿಥಿಲಾವಸ್ಥೆಯಲ್ಲಿ ರುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ನೇತೃತ್ವದ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳ ಜೊತೆ ಮಾತನಾಡಿದ ಅಧ್ಯಕ್ಷರು, ಶೀಘ್ರವೇ ಹೊಸ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ತಾಪಂ ಸಭೆಯಲ್ಲಿ ನಿರ್ಣಯ ಮಾಡಿ, ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಿಥಿಲಾವಸ್ಥೆಯಲ್ಲಿರುವ ವಿದ್ಯಾರ್ಥಿ ನಿಲಯ ಹಾಗೂ ಜೀವಭಯದಲ್ಲಿ ದಿನದೂಡುವ ವಿದ್ಯಾರ್ಥಿಗಳ ಬಗ್ಗೆ "ಕಾಯಕಲ್ಪಕ್ಕಾಗಿ ಕಾಯುತ್ತಿವೆ ಮೂರು ವಸತಿ ನಿಯಲಗಳು" ಎಂಬ ಶೀರ್ಷಿಕೆಯಡಿ "ವಾರ್ತಾಭಾರತಿ"ಯು ವಿಷೇಶ ಲೇಖನವನ್ನು ವರದಿ ಪ್ರಕಟಿಸುವ ಮೂಲಕ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ಸಂಧರ್ಭದಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿಯ ಅದ್ಯಕ್ಷೆ ಧನಲಕ್ಮೀ ಸಿ. ಬಂಗೇರ, ತಾಪಂ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಹೈದರ್ ಕೈರಂಗಳ ಹಾಜರಿದ್ದರು.