ಬಂಟ್ವಾಳ: ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಶಾಲಾ ಮಕ್ಕಳ ಪ್ರವಾಸದ ಬಸ್

ಬಂಟ್ವಾಳ, ಡಿ. 4: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಶಾಲಾ ಮಕ್ಕಳ ಪ್ರವಾಸದ ಖಾಸಗಿ ಬಸ್‍ವೊಂದು ಸ್ವಯಂಚಾಲಿತವಾಗಿ ಚಲಿಸಿ ಹೊಂಡಕ್ಕೆ ಉರುಳಿದ ಘಟನೆ ಬೋಳಂಗಡಿ ಸಮೀಪದ ನರಹರಿ ಎಂಬಲ್ಲಿ ಮಂಗಳವಾರ ಸಂಭವಿದೆ.
ಮಂಡ್ಯ ಜಿಲ್ಲೆಯ ಆರಾಧನಾ ಕಾಲೇಜಿನ 40 ವಿದ್ಯಾರ್ಥಿಗಳು ದ.ಕ.ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರ ಗಳಿಗೆ ಪ್ರವಾಸ ತೆರಳಿದ್ದು, ಇಂದು ಮಧ್ಯಾಹ್ನ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನರಹರಿ ಶ್ರೀಸದಾಶಿವ ದೇವಾಲಯವನ್ನು ವೀಕ್ಷಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಇಲ್ಲಿನ ನರಹರಿ ಸದಾಶಿವ ದೇವಾಲಯದ ಸಮೀಪ ರಸ್ತೆಯ ಬದಿಯಲ್ಲಿ ಬಸ್ ನಿಲುಗಡೆ ಮಾಡಿದ ಚಾಲಕ, ವಿದ್ಯಾರ್ಥಿಗಳ ಜೊತೆಯಲ್ಲಿ ನರಹರಿ ಬೆಟ್ಟಕ್ಕೆ ತೆರಳಿರುವ ಸಂದರ್ಭ ಈ ಘಟನೆ ನಡೆದಿದೆ.
ಬಸ್‍ನ ಒಂದು ಭಾಗ ಜಖಂಗೊಂಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಎಸ್ಸೈ ಮಂಜುಳಾ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Next Story