ದರ್ಗಾಕ್ಕೆ ಸರ್ಕಾರದ ಅನುದಾನ ಸುಳ್ಳು ಆರೋಪ: ಅಬ್ದುಲ್ ರಶೀದ್ ಸ್ಪಷ್ಟನೆ
ಮೀಲಾದುನ್ನಬಿ ಕಾರ್ಯಕ್ರಮ

ಉಳ್ಳಾಲ, ಡಿ. 4: ದರ್ಗಾಕ್ಕೆ ಸರಕಾರದಿಂದ ಎರಡು ಕೋಟಿ ರೂ. ಅನುದಾನ ಬಂದಿದ್ದು ಸಮಿತಿಯವರು ನುಂಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳಾಗಿದೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಸಯ್ಯಿದ್ ಮದನಿ ಎಜ್ಯುಕೇಶನ್ ಟ್ರಸ್ಟ್ ಅದೀನದಲ್ಲಿ ಚೆಂಬುಗುಡ್ಡೆ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದಲ್ಲಿ ಸೋಮವಾರ ನಡೆದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಕ್ಪ್ ಸಮಿತಿಯಿಂದ ದರ್ಗಾಕ್ಕೆ 80 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಅಲ್ಪಸಂಖ್ಯಾತ ಇಲಾಖೆಯಿಂದ ಆಧುನಿಕ ಮದರಸ ಯೋಜನೆಯಡಿ 10 ಲಕ್ಷ ರೂ. ನಗದು ಬಂದಿದ್ದು ಅದರಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದ್ದು ಜನರೇ ಉತ್ತರಿಸಬೇಕಾಗಿದೆ ಎಂದರು.
ಮಸೀದಿ ಅಧ್ಯಕ್ಷ ಸಿ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಪ್ ಅಧ್ಯಕ್ಷ ಯು.ಕೆ.ಮೋನು, ಪದಾಧಿಕಾರಿಗಳಾದ ಅಬ್ದುಲ್ಲಾ ಎಂ, ಅಬ್ದುಲ್ ಲತೀಫ್, ಪಿ.ಎಚ್.ಹಮೀದ್, ಅಬ್ದುಲ್ಲಾ ಡಿ, ಸಲಾಂ, ಹನೀಫ್, ಇಸ್ಮಾಯಿಲ್ ರಫೀಕ್, ಮದರಸ ಧರ್ಮಗುರು ಸುಲೈಮಾನ್, ಅಬೂಬಕ್ಕರ್ ಉಸ್ತಾದ್, ಮಹಮ್ಮದ್ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.