ಮೈಸೂರು: ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ; ಮೂವರ ಬಂಧನ
ಮೈಸೂರು,ಡಿ.4: ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ, ಮಹಿಳೆಯೋರ್ವಳನ್ನು ರಕ್ಷಣೆ ಮಾಡಿದ್ದಾರೆ.
ಇಲ್ಲಿನ ಕಲ್ಯಾಣಗಿರಿಯ ಸುನೀತಾ (43), ಗಾಂಧಿನಗರದ ಕುಮಾರ (33) ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಸಿದ್ದಲಿಂಗಪುರ ಗ್ರಾಮದ ಮಧುಸೂದನ್ (24) ಬಂಧಿತ ಆರೋಪಿಗಳು. ಅಲ್ಲದೆ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಕಲ್ಯಾಣಗಿರಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ದೇವರಾಜ ವಿಭಾಗದ ಎಸಿಪಿ ಜಿ.ಎಸ್.ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ಪಿ.ಪಿ. ಸಂತೋಷ್ ಹಾಗೂ ತಂಡ ದಾಳಿ ನಡೆಸಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story