ಸಮರಕಲೆಯಿಂದ ದೈಹಿಕ ಸಾಮರ್ಥ್ಯ: ಜಾನ್ ಲೀವರ್
ಮಂಕಿ ಮೇಹೆಮ್ ಫೈಟ್ ಕ್ಲಬ್‌ಗೆ ಚಿತ್ರನಟ ಜಾನ್ ಲೀವರ್ ಭೇಟಿ

ಮಂಗಳೂರು, ಡಿ. 4: ನಗರದ ಹಂಪನಕಟ್ಟೆಯಲ್ಲಿರುವ ಸಮರಕಲೆಯ ತರಬೇತಿ ಕೇಂದ್ರ 'ಮಂಕಿ ಮೇಹಮ್ ಫೈಟ್ ಕ್ಲಬ್' ಗೆ ಹಿಂದಿ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಜಾನ್ ಲೀವರ್ ಇತ್ತೀಚೆಗೆ ಭೇಟಿ ನೀಡಿದರು. ಕರುಣಾ ಇಂಫ್ರಾಸ್ಟಕ್ಚರ್ ಇಂಡಿಯಾ ವತಿಯಿಂದ ನಿರ್ಮಿಸಲಾದ ನವೀಕೃತ ಕರುಣಾ ರೆಸಿಡೆನ್ಸಿ ಅತಿಥಿ ಗ್ರಹದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅವರು ಮಂಕಿ ಮೇಹಮ್ ಫೈಟ್ ಕ್ಲಬ್ ನಲ್ಲಿ ಸಮರಕಲೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 'ಯುವ ಜನರಲ್ಲಿ ಕ್ರೀಡಾ ಮನೋಭಾವ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಮರಕಲೆ ಇತ್ತೀಚಿಗೆ ಭಾರತದಲ್ಲಿ ಜನಪ್ರಿಯವಾಗುತ್ತಿದೆ' ಎಂದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ 'ಸದಾಶಯ' ತ್ರೈಮಾಸಿಕದ ಪ್ರಧಾನ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ' ಸಮರ ಕಲೆಯನ್ನು ಕಲಿಯುವವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಇದನ್ನು ಸ್ವರಕ್ಷಣೆಗೆ ಬಳಸುವುದರೊಂದಿಗೆ ಸಮಾಜದ ಭದ್ರತೆಗಾಗಿಯೂ ಉಪಯೋಗಿಸಿಕೊಳ್ಳುವುದು ಯುವಕರ ಕರ್ತವ್ಯ' ಎಂದು ನುಡಿದರು. ಕರುಣಾ ರೆಸಿಡೆನ್ಸಿ ಯ ಮಾಲಕ ಕರುಣಾಕರ್, ಕದ್ರಿ ದೇವಸ್ಥಾನದ ಟ್ರಸ್ಟಿ ದೇವದಾಸ್ ಪಾಂಡೇಶ್ವರ್ ಅತಿಥಿಗಳಾಗಿದ್ದರು.
ಮಂಕಿ ಮೇಹೆಮ್ ನ ರಾಜ್ಯಾಧ್ಯಕ್ಷ ರಾಜಗೋಪಾಲ್ ರೈ ಸ್ವಾಗತಿಸಿದರು. ಸಂಸ್ಥೆಯ ಪಾಲುದಾರ ಸಚಿನ್ ರಾಜ್ ರೈ ವಂದಿಸಿದರು. ನಿರ್ದೇಶಕ ದಿತಿನ್ ರಾಜ್ ರೈ , ತರಬೇತುದಾರ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸಹಕರಿಸಿದರು.