ಪೆರ್ಣಂಕಿಲ ದೇವಳದ ನವೀಕೃತ ಭೋಜನಶಾಲೆ ಉದ್ಘಾಟನೆ

ಉಡುಪಿ, ಡಿ.4: ಪೇಜಾವರ ಮಠದ ಅಧೀನದಲ್ಲಿರುವ ಪ್ರಾಚೀನ ಸನ್ನಿಧಿ ‘ಕೊಪ್ಪರಿಗೆ ಅಪ್ಪ’ ಸೇವೆ ಖ್ಯಾತಿಯ ಪೆರ್ಣಂಕಿಲದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿತ್ಯ ಭೋಜನ ಪ್ರಸಾದ ವಿತರಣೆಯ ನವೀಕೃತ ಭೋಜನಶಾಲೆಯನ್ನು ಮಂಗಳವಾರ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಠದ ದಿವಾನ ಎಂ.ರಘುರಾಮಾಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ, ದೇವಳದ ಅರ್ಚಕ ಮಾಧವ ಭಟ್, ವ್ಯವಸ್ಥಾಪಕ ಹರೀಶ್ ಸರಳಾಯ, ಸುರೇಶ ತಂತ್ರಿ, ಮಹೇಶ ಕುಲಕರ್ಣಿ ಇಂಜಿನಿಯರ್ ಫಟ್ಟಾಭಿರಾಮ ಆಚಾರ್ಯ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಠದ ಪಟ್ಟದ ದೇವರಾದ ಶ್ರೀರಾಮವಿಠಲ ದೇವರ ಪೂಜೆಯನ್ನು ಶ್ರೀಗಳು ನೆರವೇರಿಸಿ ಭಕ್ತರನ್ನು ಅನುಗ್ರಹಿಸಿದರು.
Next Story