ಬುಲಂದ್ ಶಹರ್ ಹಿಂಸಾಚಾರ ವಿಎಚ್ ಪಿ, ಆರೆಸ್ಸೆಸ್, ಬಜರಂಗದಳದ ಪೂರ್ವಯೋಜಿತ ಪಿತೂರಿ: ಉತ್ತರ ಪ್ರದೇಶ ಸಚಿವರ ಆರೋಪ

ಬುಲಂದ್‌ಶಹರ್,ಡಿ.4: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರವು ವಿಶ್ವ ಹಿಂದು ಪರಿಷದ್, ಸಂಘಪರಿವಾರ ಮತ್ತು ಬಜರಂಗದಳದ ಪೂರ್ವಯೋಜಿತ ಪಿತೂರಿಯಾಗಿದೆ ಎಂದು ಉತ್ತರ ಪ್ರದೇಶ ಸಚಿವ ಒ.ಪಿ.ರಾಜ್ಬರ್ ಆರೋಪಿಸಿದ್ದಾರೆ.
ಘಟನೆಯಲ್ಲಿ ಕೆಲವು ಬಿಜೆಪಿ ನಾಯಕರ ಹೆಸರುಗಳೂ ಕೇಳಿಬರುತ್ತಿದ್ದು, ಮುಸ್ಲಿಮರ ಕಾರ್ಯಕ್ರಮ ಇದ್ದ ದಿನವೇ ಪ್ರತಿಭಟನೆ ನಡೆಸಲು ಕಾರಣವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ. ದನದ ಕಳೇಬರ ದೊರೆತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದ ವೇಳೆ ಉದ್ರಿಕ್ತರ ಗುಂಪು ಪೊಲೀಸ್ ನಿರೀಕ್ಷಕ ಸುಬೋಧ್ ಕುಮಾರ್ ಸಿಂಗ್ ಹಾಗೂ 20ರ ಹರೆಯದ ಸುಮಿತ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸಿದ್ದು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
Next Story





