ಕಾರ್ಕಳ: ಖಾಸಗಿ ಜಮೀನು ಮಾಲಕರಿಗೆ ಸೂಚನೆ
ಉಡುಪಿ, ಡಿ.4: 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಮುಖ್ಯಮಂತ್ರಿಗಳ ವಸತಿ ಯೋಜನೆ ಅನುಷ್ಠಾನಗೊಳಿಸಲು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಸಲುವಾಗಿ, ಖಾಸಗಿ ಜಮೀನನ್ನು ಖರೀದಿಸಲು ಸೂಚಿಸಲಾಗಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಲು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ, ತಮ್ಮ ಹೆಸರಿನಲ್ಲಿ 50 ಸೆಂಟ್ಸ್‌ಗಳಿಗಿಂತ ಹೆಚ್ಚಿನ ಖಾಸಗಿ ಜಮೀನು ಲ್ಯವಿದ್ದು, ಈ ಜಮೀನನ್ನು ಮಾರಾಟ ಮಾಡಲು ಇಚ್ಛಿಸುವ ಮಾಲಕರು ಡಿ.10ರೊಳಗೆ ಪುರಸಭಾ ಕಚೇರಿಗೆ ಪೂರಕ ದಾಖಲೆಗಳೊಂದಿಗೆ ಮಾಹಿತಿ ನೀಡುವಂತೆ ಕಾರ್ಕಳ ಪುರಸಬೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





