ಡಿ.8 ರಂದು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್

ಉಪ್ಪಿನಂಗಡಿ,ಡಿ.4: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಡಿ.8 ಶನಿವಾರ ಮಗ್ರಿಬ್ ನಮಾಝ್ ಬಳಿಕ ಸೂರಿಕುಮೇರು ಪೆಟ್ರೋಲ್ ಬಂಕ್ ಬಳಿ ಮೈದಾನದಲ್ಲಿ ನಡೆಯಲಿದೆ.
ಜಿಎಂ ಕಾಮಿಲ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು ಪ್ರಾರ್ಥನೆ ಮಾಡಲಿದ್ದು, ರಫೀಕ್ ಸಅದಿ ದೇಲಂಪಾಡಿ ಹಾಗೂ ಟಿ.ಎಂ ಮುಹಿಯದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಭಾಷಣ ನಡೆಸುವರು. ತ್ವಾಹಾ ತಂಙಳ್ ಮಲಪ್ಪುರಂ ತಂಡದಿಂದ ಬುರ್ದಾ ಕಾರ್ಯಕ್ರಮ ನಡೆಯಲಿದ್ದು, ಮಾಸ್ಟರ್ ಶಿಹಾನ್ ಉಳ್ಳಾಲ ನ'ಅತ್ ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ-ಉಮರಾ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story