ಲಂಚ ಪ್ರಕರಣ: ಟಿಟಿವಿ ದಿನಕರನ್ ವಿರುದ್ಧ ಕ್ರಿಮಿನಲ್ ಆರೋಪ ರಚನೆ
ಹೊಸದಿಲ್ಲಿ, ಡಿ. 4: ಎರಡು ಎಲೆಗಳನ್ನು ಪಕ್ಷದ ಚಿಹ್ನೆಯಾಗಿ ನೀಡುವಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಐಎಡಿಎಂಕೆಯ ಮಾಜಿ ನಾಯಕ ಟಿಟಿವಿ ದಿನಕರನ್ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯ ಕ್ರಿಮಿನಲ್ ಪಿತೂರಿಯ ಆರೋಪ ರೂಪಿಸಿದೆ.
ನ್ಯಾಯಾಲಯದ ಮುಂದೆ ಹಾಜರಾಗಿ ತಾನು ತಪ್ಪು ಮಾಡಿಲ್ಲ ಎಂದು ಮನವಿ ಮಾಡಿಕೊಂಡ ಬಳಿಕ ವಿಚಾರಣೆ ಆರಂಭಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಗಳನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ನಿಗದಿಪಡಿಸಿತು. ಎಐಎಡಿಎಂಕೆಯಿಂದ ವಜಾಗೊಂಡ ಬಳಿಕ ಎಎಂಎಂಕೆ ಪಕ್ಷ ಆರಂಭಿಸಿದ ದಿನಕರನ್ 2017 ಎಪ್ರಿಲ್‌ನಲ್ಲಿ ಬಂಧಿತರಾಗಿದ್ದರು. ಅನಂತರ ಅವರಿಗೆ ಜಾಮೀನು ನೀಡಲಾಗಿತ್ತು.
Next Story