ಪ್ರೊ ಕಬಡ್ಡಿ: ಗುಜರಾತ್ ವಿರುದ್ಧ ಪಾಟ್ನಾ ಪಲ್ಟಿ
ಹೊಸದಿಲ್ಲಿ, ಡಿ.4: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡ 45-27 ಅಂತರದಿಂದ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಗುಜರಾತ್ 6ನೇ ಆವೃತ್ತಿಯ ಲೀಗ್‌ನಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡ 2ನೇ ತಂಡ ಎನಿಸಿಕೊಂಡಿತು. ಪರ್ವೇಶ್ ಭೈನ್ಸ್‌ವಾಲ್(8 ಅಂಕ), ಸಚಿನ್(10) ಹಾಗೂ ಪ್ರಪಂಜನ್ (9 ಅಂಕ) ಗುಜರಾತ್ ಗೆಲುವಿಗೆ ನೆರವಾದರು.
ಹಾಲಿ ಚಾಂಪಿಯನ್ ಪಾಟ್ನಾ ಪರ ಪರ್ದೀಪ್ ನರ್ವಾಲ್ ಕೇವಲ 1 ಅಂಕ ಗಳಿಸಿ ನಿರಾಸೆಗೊಳಿಸಿದರು.ಜವಹರ್ ದಾಗರ್ 5 ಅಂಕ ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡ ತೆಲುಗು ಟೈಟಾನ್ಸ್ ತಂಡವನ್ನು 34-29 ಅಂತರದಿಂದ ಮಣಿಸಿತು. ದಿಲ್ಲಿ ಪರ ಎಂದಿನಂತೆ ಮೆರಾಜ್ ಶೇಕ್(9 ಅಂಕ)ಉತ್ತಮ ಪ್ರದರ್ಶನ ನೀಡಿದರು. ಟೈಟಾನ್ಸ್ ಪರ ರಾಹುಲ್ ಚೌಧರಿ 8 ಅಂಕ ಗಳಿಸಿದರು.
Next Story





