ಮೂಡುಬಿದಿರೆ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ 'ಕಾರ್ ವಾನೇ ಮದೀನಾ' ಮೀಲಾದ್ ಜಾಥ

ಮೂಡುಬಿದಿರೆ, ಡಿ. 5: ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯ ಸಮಿತಿ ಹಮ್ಮಿಕೊಂಡ 'ಕಾರ್ ವಾನೇ ಮದೀನಾ' ಮಿಲಾದ್ ಜಾಥವು ಜ್ಯೋತಿ ನಗರ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಖತೀಬ್ ಶರೀಫ್ ಫೈಝಿ ಉದ್ಘಾಟಿಸಿ ಜಾಥಕ್ಕೆ ಚಾಲನೆ ನೀಡಿದರು.
ಜಾಥದಲ್ಲಿ ಸ್ಕೌಟ್, ದಫ್, ಎಸ್ಕೆಸ್ಸೆಸ್ಸೆಫ್ ಕಾರ್ಯಕರ್ತರು,ಎಸ್ಕೆಎಸ್ ಬಿವಿ ವಿದ್ಯಾರ್ಥಿಗಳು, ಮದ್ರಸಾ ಮ್ಯಾನೇಜ್ಮೆಂಟ್ ಸದಸ್ಯರು, ಎಸ್ ವೈ ಎಸ್ ಸದಸ್ಯರು ಹಾಗೂ ಮತ್ತಿತರರು ಪಾಲ್ಗೊಂಡಿದ್ದು, ಜಾಥವು ಮೂಡುಬಿದಿರೆಯ ಮುಖ್ಯ ಹೆದ್ದಾರಿಯಲ್ಲಿ ಸಾಗಿ ಸಮಾಜ ಮಂದಿರದಲ್ಲಿ ಕೊನೆಗೊಂಡಿತು.
ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯ ಅಧ್ಯಕ್ಷ ಅಝೀಝ್ ಮಾಲಿಕ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಬ್ದುಲ್ಲಾ ರಹ್ಮಾನಿ ಬಾಂಬಿಲ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಜಂ ಇಯ್ಯತುಲ್ ಮುಅಲ್ಲಿಮೀನ್ ಇದರ ವಲಯಾಧ್ಯಕ್ಷ ಹಾರಿಸ್ ದಾರಿಮಿ, ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ಬುವಾಕ, ಹಂಡೇಲ್ ಜುಮಾ ಮಸೀದಿಯ ಖತೀಬ್ ಹನೀಫ್ ಫೈಝಿ, ಲಾಡಿ ಮಸ್ಜಿದುನ್ನೂರ್ ಮಸೀದಿಯ ಖತೀಬ್ ಹಕೀಂ ಮದನಿ, ಎಸ್ ವೈ ಎಸ್ ಜಿಲ್ಲಾ ಕೋಶಾಧಿಕಾರಿ ಉಸ್ಮಾನ್ ದುಗ್ಗೋಡಿ, ಉದ್ಯಮಿ ಮುಜೀಬ್, ಉಸ್ಮಾನ್ ಸೂರಿಂಜೆ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ವಲಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಸ್ವಾಗತಿಸಿದರು. ಮೂಡುಬಿದಿರೆ ಕ್ಲಸ್ಟರ್ ಕೋಶಾಧಿಕಾರಿ ಅಶ್ರಫ್ ಮರೋಡಿ ವಂದಿಸಿದರು.