ಆಧುನಿಕ ಬ್ಯಾಂಕಿಂಗ್ ಕುರಿತು ವಿಶೇಷ ಉಪನ್ಯಾಸ

ಉಡುಪಿ, ಡಿ.5: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರಿಗೆ ಆಧುನಿಕ ಬ್ಯಾಂಕಿಂಗ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಚೆನ್ನೈ ಬ್ಯಾಂಕ್ ಆಫ್ ಇಂಡಿಯ ನಿವೃತ್ತ ಮುಖ್ಯ ಪ್ರಬಂಧಕ ವಿ.ವಸಂತ್ ರಾವ್, ಆಧುನಿಕ ಬ್ಯಾಂಕಿಂಗ್ ಮತ್ತು ಎನ್‌ಪಿಎ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು.
ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ.ಉಮೇಶ್ ಮಯ್ಯ, ಕಾರ್ಯಕ್ರಮ ಸಂಯೋಜಕ ಗಣೇಶಪ್ಪ ಕೆ. ಉಪಸ್ಥಿತರಿದ್ದರು. ಸೌಮ್ಯ ಶೆಟ್ಟಿ ಮತ್ತು ಪೂರ್ಣಿಮ ವಿ.ಭಟ್ ಸ್ವಾಗತಿಸಿದರು. ಸುಭಾಶಿತ ಆರ್.ಶೆಟ್ಟಿ ವಂದಿಸಿದರು. ದಿವ್ಯಾ ಆರ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
Next Story





