ಸಿಸಿಬಿ ಪೊಲೀಸರಿಂದ ಹುಕ್ಕಾಬಾರ್ ಮೇಲೆ ದಾಳಿ: ಇಬ್ಬರ ಬಂಧನ

ಬೆಂಗಳೂರು, ಡಿ.5: ಹುಕ್ಕಾ ಬಾರ್‌ಗಳ ಮೇಲೆ ದಾಳಿ ಮುಂದುವರೆಸಿರುವ ಸಿಸಿಬಿ ಪೊಲೀಸರು ಕಲ್ಯಾಣನಗರದ ಹುಕ್ಕಾ ಲಾಂಜ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಸಂಜಯ್ ನಗರದ ಚಿರಾಗ್(25), ಅಚ್ಚುತ್(28) ಬಂಧಿತ ಆರೋಪಿಗಳು ಎಂದು ಸಿಸಿಬಿ ತಿಳಿಸಿದೆ.
ಕಲ್ಯಾಣ ನಗರದ ಎಚ್.ಬಿ.ಆರ್ ಲೇಔಟ್‌ನ ಕೆಫೆಯಲ್ಲಿ ಹುಕ್ಕಾ ಲಾಂಜ್‌ಗಳನ್ನು ತೆರೆದು ಹುಕ್ಕಾ ದಂಧೆ ನಡೆಸುತ್ತಿದ್ದ ಮಾಹಿತಿಯಾಧರಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳು ಕಾನೂನುಬಾಹಿರವಾಗಿ ಹುಕ್ಕಾ ಲಾಂಜ್ ತೆರೆದು ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಹುಕ್ಕಾ ಸೇದಲು ಅವಕಾಶ ಮಾಡಿಕೊಡುತ್ತಿದ್ದರು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





