‘ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ’ಗೆ ಪ್ರಶಸ್ತಿಯ ಸಿಂಹಪಾಲು
ಉಡುಪಿ ರಂಗಭೂಮಿ 39ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

ಉಡುಪಿ, ಡಿ.5: ಮಂಗಳವಾರ ಮುಕ್ತಾಯಗೊಂಡ ರಂಗಭೂಮಿ ಉಡುಪಿಯ 39ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೆಂಗಳೂರಿನ ಸಮಸ್ಟಿ ತಂಡ ಪ್ರದರ್ಶಿಸಿದ ಮರಾಠಿ ಮೂಲದ ಹಾಗೂ ರವೀಂದ್ರ ಪೂಜಾರಿ ನಿರ್ದೇಶನದ ‘ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ’ ನಾಟಕ ಪ್ರಥಮ ಬಹುಮಾನವೂ ಸೇರಿದಂತೆ ಪ್ರಶಸ್ತಿಯ ಸಿಂಹಪಾಲನ್ನು ಬಾಚಿಕೊಂಡಿತು.
ನ.21ರಿಂದ ಪ್ರಾರಂಗೊಂಡುಈಬಾರಿರ್ಸ್ಪೆಯಲ್ಲಿ ಪ್ರದರ್ಶಿಸಲಾದ 14 ನಾಟಕಗಳಲ್ಲಿ ಪರೇಶ್ ಮೊಕಾಶಿ ಅವರ ಮರಾಠಿ ಮೂಲದ, ಕೆ.ಆರ್. ಓಂಕಾರ್ ಕನ್ನಡಕ್ಕೆ ಅನವಾದಿಸಿದ ಈ ನಾಟಕ 2018ನೇ ಸಾಲಿನ ಸರ್ವಶ್ರೇಷ್ಠ ನಾಟಕವಾಗಿ 35,000ರೂ.ಗಳ ನಗದು ಹೊಂದಿರುವ ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ಬಹುಮಾನ, ಸ್ಮರಣಿಕೆ ಹಾಗೂ ಡಾ.ಟಿಎಂಎ ಪೈ ಸ್ಮಾರಕ ಪರ್ಯಾಯ ಫಲಕವನ್ನು ಗೆದ್ದುಕೊಂಡಿತು. ಉಡುಪಿ ಕೊಡವೂರಿನ ಸುಮನಸಾ ತಂಡದ ‘ಅವ್ವ’ ನಾಟಕಕ್ಕೆ 25,000ರೂ. ಗಳ ನಗದನ್ನು ಒಳಗೊಂಡ ದ್ವಿತೀಯ ಪ್ರಶಸ್ತಿಯೊಂದಿಗೆ ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಫಲಕ ದೊರೆತಿದೆ. ಡಾ.ಪದ್ಮಿನಿ ನಾಗರಾಜ ರಚನೆಯ ಈ ನಾಟಕದ ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್.
ಬೆಂಗಳೂರಿನ ರಂಗಪಯಣ ತಂಡ ಪ್ರದರ್ಶಿಸಿದ ‘ಗುಲಾಬಿ ಗ್ಯಾಂಗು’ ನಾಟಕ ತೃತೀಯ ಬಹುಮಾನದೊಂದಿಗೆ 15,000ರೂ. ನಗದು ಹಾಗೂ ಪಡುಕುದ್ರು ಪದ್ಮಾವತಿ- ಶ್ರೀನಿವಾಸ ರಾವ್ ಸ್ಮಾರಕ ಪ್ರಶಸ್ತಿ ಹಾಗೂ ಸ್ಮರಣಿಕೆಯನ್ನು ಗೆದ್ದುಕೊಂಡಿದೆ.ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಕ್ತಾಯಗೊಂಡ ನಾಟಕದ ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು.
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದವರ ವಿವರ ಹೀಗಿದೆ
ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಕ್ತಾಯಗೊಂಡ ನಾಟಕದ ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು. ವಿವಿವಿಾಗಗಳಲ್ಲಿ ಪ್ರಶಸ್ತಿ ಜಯಿಸಿದವರ ವಿವರ ಹೀಗಿದೆ. ಶ್ರೇಷ್ಠ ನಿರ್ದೇಶನ: ಸುಮನಸಾ ಕೊಡವೂರು ತಂಡದ ‘ಅವ್ವ’ ನಾಟಕದ ನಿರ್ದೇಶನಕ್ಕಾಗಿ ಕೃಷ್ಣಮೂರ್ತಿ ಕವತ್ತಾರುಗೆ ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ಫಲಕ ಹಾಗೂ 5000ರೂ.ನಗದು (ಪ್ರಥಮ), ಮೈಸೂರಿನ ಜಿಪಿಐಇಆರ್ ರಂಗ ತಂಡದ ‘ಅಶ್ವತ್ಥಾಮ’ ನಾಟಕದ ನಿರ್ದೇಶಕ ಮೈಮ್ ರಮೇಶ್‌ಗೆ 3000 ರೂ.ಗಳ ನಗದು, ಸ್ಮರಣಿಕೆ (ದ್ವಿತೀಯ), ಬೆಂಗಳೂರಿನ ರಂಗಪಯಮ ತಂಡದ ‘ಗುಲಾಬಿ ಗ್ಯಾಂಗ್’ನ ನಿರ್ದೇಶನಕ್ಕೆ ರಾಜಗುರು ಹೊಸಕೋಟೆ ಇವರಿಗೆ 2,000ರೂ. ನಗದು, ಸ್ಮರಣಿಕೆ (ತೃತೀಯ ಬಹುಮಾನ).
ಶ್ರೇಷ್ಠ ನಟ: ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ ನಾಟಕದ ಕುಕ್ ಪಾತ್ರಧಾರಿ ಹರಿ ಸಮಸ್ಟಿಗೆ 3,000ರೂ.ನಗದು, ಸ್ಮರಣಿಕೆ (ಪ್ರಥಮ), ಭೈರವ ಪಾತ್ರಧಾರಿ ಆನಂದ್ ಪಿ.ಗೆ 2,000ರೂ.ನಗದು, ಸ್ಮರಣಿಕೆ (ದ್ವಿತೀಯ) ಹಾಗೂ ಅದೇ ನಾಟಕದ ಹಿಟ್ಲರ್ ಪಾತ್ರಧಾರಿ ಸಂದೀಪ ಬೇವಿನಹಳ್ಳಿಗೆ 1,000 ರೂ.ನಗದು, ಸ್ಮರಣಿಕೆ (ತೃತೀಯ ಬಹುಮಾನ).
ಶ್ರೇಷ್ಠ ನಟಿ: ಮೊಕ್ಕಾಂ ಪೋಸ್ಟ್ ಬೊಂಬಿಲವಾಡಿ ನಾಟಕದ ಕಾಕು/ರಾಣಿ ಪಾತ್ರಧಾರಿ ಶ್ವೇತಾ ಎಸ್.ಗೆ 3,000ರೂ., ಸ್ಮರಣಿಕೆ (ಪ್ರಥಮ), ಗುಲಾಬಿ ಗ್ಯಾಂಗು ನಾಟಕದ ಕಮಲಾದೇವಿ ಪಾತ್ರಧಾರಿ ನಯನಾ ಸೂಡಗೆ 2,000ರೂ. ,ಸ್ಮರಣಿಕೆ (ದ್ವಿತೀಯ), ಅವ್ವ ನಾಟಕದ ಅವ್ವ ಪಾತ್ರಧಾರಿ ವಿದ್ಯಾದಾಯಿನಿಗೆ 1,000ರೂ. ನಗದು ಹಾಗೂ ಸ್ಮರಣಿಕೆ (ತೃತೀಯ ಬಹುಮಾನ).
ಶ್ರೇಷ್ಠ ಸಂಗೀತ: ಪ್ರಥಮ-ಬೆಂಗಳೂರು ರಂಗಪಯಣ ತಂಡದ ‘ಗುಲಾಬಿ ಗ್ಯಾಂಗ್’ಗೆ ಪ್ರಶಸ್ತಿ, 3000ರೂ. ನಗದು, ದ್ವಿತೀಯ- ಸುಮನಸಾ ಕೊಡವೂರು ತಂಡದ ‘ಅವ್ವ’ಗೆ 2000ರೂ.ನಗದು, ತೃತೀಯ- ನಾಗಮಂಗಲದ ಕನ್ನಡ ಸಂಘದ ‘ಪಂಚವಟಿ’ನಾಟಕಕ್ಕೆ 1,000ರೂ.
ಶ್ರೇಷ್ಠ ರಂಗಪರಿಕರ: ಪ್ರಥಮ: ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ, 3,000 ರೂ. ನಗದು, ಸ್ಮರಣಿಕೆ, ದ್ವಿತೀಯ: ಅವ್ವ ನಾಟಕಕ್ಕೆ 2,000ರೂ. ನಗದು, ಸ್ಮರಣಿಕೆ, ತೃತೀಯ: ನಾಗಮಂಗಲ ಕನ್ನಡ ಸಂಘದ ‘ಪಂಚವಟಿ’ಗೆ 1,000ರೂ, ಸ್ಮರಣಿಕೆ.
ಶ್ರೇಷ್ಠ ಪ್ರಸಾಧನ:
ಶ್ರೇಷ್ಠ ರಂಗ ಬೆಳಕು: ಪ್ರಥಮ: ಗುಲಾಬಿ ಗ್ಯಾಂಗು ನಾಟಕಕ್ಕೆ 3,000ರೂ., ಸ್ಮರಣಿಕೆ, ದ್ವಿತೀಯ: ಅವ್ವ ನಾಟಕಕಕ್ಕೆ 2000ರೂ., ಸ್ಮರಣಿಕೆ, ತೃತೀಯ: ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿಗೆ 1000ರೂ.ನಗದು, ಸ್ಮರಣಿಕೆ.
ಶ್ರೇಷ್ಠ ಹಾಸ್ಯ ನಟನೆ: ಮೊಕ್ಕಾಂ ಪೋಸ್ಟ್ ಬೊಂಬಿಲವಾಡಿ ನಾಟಕದ ವೈದ್ಯಾ ಭುವ ಪಾತ್ರಧಾರಿ ಪರಮೇಶ್ವರ ಕೆ.ಎಸ್. 2000ರೂ.ನಗದು, ಸ್ಮರಣಿಕೆ.
ಶ್ರೇಷ್ಠ ಬಾಲನಟನೆ: ಗುಲಾಬಿ ಗ್ಯಾಂಗು ನಾಟಕದ ಬಾಲಕಿ ಕಮಲಾದೇವಿ ಪಾತ್ರಧಾರಿ ಅಮೃತಗೆ 1,000ರೂ.ನಗದು, ಸ್ಮರಣಿಕೆ.
ಮೆಚ್ಚುಗೆ ಬಹುಮಾನಗಳು: ಕನ್ನಡ ಸಂಘ, ನಾಗಮಂಗಲತಂಡದ ಪಂಚವಟಿ ಯ ಸೀತೆ 1 ಪಾತ್ರಧಾರಿಣಿ ಅರ್ಚನಾ ಮೂರೂರು, ಸಮಷ್ಟಿ ಬೆಂಗಳೂರು ತಂಡದ ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ ನಾಟಕದ ಕುಂಡಲಿನಿ ಪಾತ್ರಧಾರಿಣಿ ಲಹರಿ, ಸುಮನಸಾ ಕೊಡವೂರು ತಂಡದ ಅವ್ವ ನಾಟಕದ ಲಂಕೇಶ್ ಪಾತ್ರಧಾರಿ ಅಕ್ಷತ್ ಅಮೀನ್, ಮೈಸೂರಿನ ಜಿಪಿಐಇಆರ್ ರಂಗ ತಂಡದ ಅಶ್ವತ್ಥಾಮ ನಾಟಕದ ಅಶ್ವತ್ಥಾಮ ಪಾತ್ರಧಾರಿ ಹೆಚ್.ಎಂ.ಶಿವು, ಭೂಮಿಕಾ ಹಾರಾಡಿ ತಂಡದ ಕಾತ್ಯಾಯಿನಿ ನಾಟಕದ ಕಾತ್ಯಾಯಿನಿ ಪಾತ್ರಧಾರಿಣಿ ಮಂಜುಳಾ ಜರ್ನಾದನ್.
ಈ ಬಾರಿ ಸ್ಪರ್ಧೆಯ ತೀರ್ಪುಗಾರರಾಗಿ ಉಪೇಂದ್ರ ಸೋಮಯಾಜಿ, ಲಕ್ಷ್ಮೀನಾರಾಯಣ ಭಟ್, ಪಾರ್ವತಿ ಜಿ. ಐತಾಳ್, ವಿನ್ಯಾಸ ಹೆಗಡೆ ಹಾಗೂ ತಪಸ್ವಿ ಹೆಚ್.ಎಂ. ಸಹಕರಿಸಿದ್ದರು.
ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮುಂದಿನ ಜ.13ರ ರವಿವಾರ ಸಂಜೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಸಮಷ್ಟಿ ಬೆಂಗಳೂರು ತಂಡದ ‘ಮೊಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ’ ನಾಟಕದ ಮರು ಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.