ಪುತ್ತೂರು: 100 ರೂ. ನೀಡದಕ್ಕೆ ಸ್ನೇಹಿತನಿಗೆ ಚೂರಿಯಿಂದ ಇರಿದ ಭೂಪ !

ಪುತ್ತೂರು, ಡಿ. 5: 100 ರೂ. ನೀಡಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಸ್ನೇಹಿತನೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದ್ದು, ಗಾಯಾಳುವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲಂಕಾರಿಕ ಹೂವುಗಳು ಮತ್ತು ಇತರ ವಸ್ತುಗಳನ್ನು ಫುಟ್‍ಪಾತ್‍ನಲ್ಲಿ ಮಾರಾಟ ಮಾಡುತ್ತಿದ್ದ ಹಾಸನ ನಿವಾಸಿ ಗೋಪಾಲ ಗೌಡ ಇರಿತಕ್ಕೆ ಒಳಗಾದ ವ್ಯಕ್ತಿ. ಆತನ ಸ್ನೇಹಿತ ಮಂಜ ಚೂರಿಯಿಂದ ಇರಿದ ಆರೋಪಿ. ಬುಧವಾರ ರಾತ್ರಿ ನಗರದ ಖಾಸಗಿ ಬಸ್ ನಿಲ್ದಾಣದ ಹಿಂಬದಿಯ ಫುಟ್‍ಪಾತ್‍ನಲ್ಲಿ ಗೋಪಾಲ ಗೌಡ ಮಲಗಿದ್ದ ವೇಳೆ ಈ ಘಟನೆ ನಡೆದಿದೆ.
ಗೋಪಾಲ ಗೌಡರಲ್ಲಿ ಮಂಜುನಾಥ 100 ರೂ. ನೀಡುವಂತೆ ಕೇಳಿದ್ದು, ಹಣವಿಲ್ಲ ಎಂದು ಹೇಳಿದಕ್ಕೆ ತನ್ನ ಚೀಲದಿಂದ ಚೂರಿ ತೆಗೆದು ಗೋಪಾಲ ಗೌಡರ ಕೆನ್ನೆ ಹಾಗೂ ಕೈಗಳಿಗೆ ಇರಿದು ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಅವರು ಗಾಯಗೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story