ಹಿರಿಯಡಕ: ಪುರಾತ್ತತ್ವ ಶಾಸ್ತ್ರದ ವಿಶೇಷ ಉಪನ್ಯಾಸ

ಉಡುಪಿ, ಡಿ.5: ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತುಳುನಾಡಿ ನಲ್ಲಿ ಪ್ರಾಗೈತಿಹಾಸ ಕಾಲಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ದೊರೆಯುತಿದ್ದು, ಈ ಪ್ರದೇಶವು ಪ್ರಾಚೀನ ಮಾನವ ಬದುಕಿದ ಸ್ಥಳಗಳಲ್ಲಿ ಒಂದಾಗಿದೆ ಎಂದು ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನ ಚರಿತ್ರೆ ಮತ್ತು ಪುರಾತ್ತತ್ವ ವಿಭಾಗದ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ಹೇಳಿದ್ದಾರೆ.
ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಯೋಗ ದೊಂದಿಗೆ ನಡೆದ ಪುರಾತತ್ವ ಶಾಸ್ತ್ರ ಕುರಿತ ವಿಶೇಷ ಉಪನ್ಯಾಸ ಕಾಯ ರ್ಕ್ರಮದಲ್ಲಿ ಮಾತನಾಡುತಿದ್ದರು.
ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಅಧ್ಯಕ್ಷತೆ ವಹಿಸಿ, ಮಾತನಾಡಿ ಪ್ರಾಗೈತಿಹಾಸ ಕಾಲದ ಮಹತ್ವವನ್ನು ಅರ್ಥೈಸಿಕೊಂಡು ವರ್ತಮಾನದ ಬದುಕಿಗೆ ಅದನ್ನು ಅನ್ವಯಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕಿ ಸುಮನಾ ಬಿ., ಇತಿಹಾಸ ಹಾಗೂ ಪುರಾತತ್ವ ವಿಬಾಗದ ಮುಖ್ಯಸ್ಥ ವಿ.ಎನ್. ಗಾಂವ್ಕರ್ ಉಪಸ್ಥಿತರಿದ್ದರು. ಸಫ್ರೀನಾ ಸ್ವಾಗತಿಸಿ, ಪ್ರಿಯಾಂಕ ಕಾರ್ಯಕ್ರಮ ನಿರ್ವಹಿಸಿ, ಸಂಧ್ಯಾ ವಂದಿಸಿದರು.