ಅಬ್ಬೆ ಪ್ರಶಸ್ತಿಗೆ ಮಾಜಿ ಸಚಿವೆ ರಾಣಿ ಸತೀಶ್, ಕೃಷಿ ಪ್ರಶಸ್ತಿಗೆ ರೈತ ಮೇಟಿ ಆಯ್ಕೆ
ಬಾಗಲಕೋಟೆ, ಡಿ.5: ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ನೀಡಲಾಗುವ ಅಬ್ಬೆ ಪ್ರಶಸ್ತಿಗೆ ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ಕೃಷಿ ಪ್ರಶಸ್ತಿಗೆ ಪ್ರಗತಿಪರ ರೈತ ಮಲ್ಲಣ್ಣ ಮೇಟಿ ಆಯ್ಕೆಯಾಗಿದ್ದಾರೆ.
ಈ ಎರಡೂ ಪ್ರಶಸ್ತಿಗಳು ತಲಾ ಒಂದು ಲಕ್ಷ ರೂ.ನಗದು, ಸ್ಮರಣಿಕೆ ಒಳಗೊಂಡಿವೆ. ಮಹಿಳಾ ಸಬಲೀಕರಣ, ಸಂಘಟನೆಯಲ್ಲಿ ಸಾಧನೆ ಮಾಡಿದವರಿಗೆ ಅಬ್ಬೆ ಪ್ರಶಸ್ತಿ ಹಾಗೂ ಪ್ರಗತಿಪರ ಕೃಷಿಕರಿಗೆ ಕೃಷಿ ಪ್ರಶಸ್ತಿಯನ್ನು ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿದೆ. ಡಿ.7ರಂದು ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





